ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ವ್ಯಕ್ತಿ ಅರೆಸ್ಟ್!

ಶುಕ್ರವಾರ, 8 ಜುಲೈ 2022 (12:46 IST)
ಹೈದರಾಬಾದ್ : ವಿವಿಧ ಫೋನ್ ನಂಬರ್ಗಳಿಂದ ಮಹಿಳೆಯರಿಗೆ ಅಶ್ಲೀಲ ವೀಡಿಯೋಗಳನ್ನು ಕಳುಹಿಸುತ್ತಿದ್ದ 58 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
 
ಆರೋಪಿಯನ್ನು ರೈಸುದ್ದೀನ್ ಎಂದು ಗುರುತಿಸಲಾಗಿದ್ದು, ಈತ ಹೈದರಾಬಾದ್ನ ಬಜಾರ್ಘಾಟ್ ಪ್ರದೇಶದ ನಿವಾಸಿಯಾಗಿದ್ದಾನೆ. ಈ ಕುರಿತಂತೆ ವಿಚಾರಣೆ ವೇಳೆ ರೈಸುದ್ದೀನ್ ತನ್ನ ಪತ್ನಿಯೊಂದಿಗೆ ದೈಹಿಕ ಸಂಬಂಧ ಹೊಂದಿಲ್ಲದ ಕಾರಣ ಕೆಲವು ತಿಂಗಳಿನಿಂದ ಬೇಸರಗೊಂಡಿದ್ದನು.

ಹೀಗಾಗಿ ಮಹಿಳೆಯರ ಹೆಸರಿನಲ್ಲಿ ಫೇಸ್ಬುಕ್ ಅಕೌಂಟ್ ಕ್ರಿಯೆಟ್ ಮಾಡಿ. ನಂತರ ಮಹಿಳೆಯರ ಬಳಿ ನಂಬರ್ ಪಡೆದು ಅಶ್ಲೀಲ ವೀಡಿಯೋಗಳನ್ನು ಕಳುಹಿಸಲು ಆರಂಭಿಸಿದ್ದಾಗಿ ಹೇಳಿದ್ದಾನೆ.  

ಕಳೆದ ಕೆಲವು ತಿಂಗಳುಗಳಿಂದ ಮೂರು ವಿಭಿನ್ನ ಮೊಬೈಲ್ ನಂಬರ್ಗಳಿಂದ 5ಕ್ಕೂ ಹೆಚ್ಚು ಮಹಿಳೆಯರಿಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಿರುವ ವಿಚಾರ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ