ವಿಶೇಷ ಅಧಿವೇಶನಕ್ಕೆ ಒಪ್ಪಿಗೆ ನೀಡಿದ ಪಂಜಾಬ್ ಗವರ್ನರ್
ಇದೀಗ ಸೆಪ್ಟೆಂಬರ್ 27ರಂದು 1 ದಿನದ ವಿಧಾನಸಭೆ ಅಧಿವೇಶನ ನಡೆಸುವ ಸರ್ಕಾರದ ಮನವಿಯನ್ನು ಅವರು ಅಂಗೀಕರಿಸಿದ್ದಾರೆ.
ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರ ಸರಕು ಸೇವಾ ತೆರಿಗೆ, ವಿದ್ಯುತ್ ಪೂರೈಕೆಯಂತಹ ವಿಷಯಗಳ ಕುರಿತು ಚರ್ಚಿಸಲು ಸೆಪ್ಟೆಂಬರ್ 27ರಂದು ಬೆಳಗ್ಗೆ 11 ಗಂಟೆಗೆ ಅಧಿವೇಶನ ನಡೆಸಲಿದೆ. ಇದಕ್ಕೆ ರಾಜ್ಯಪಾಲರು ಅನುಮತಿ ನೀಡಿರುವುದಾಗಿ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವನ್ ಭಾನುವಾರ ತಿಳಿಸಿದ್ದಾರೆ.