ಪಂಜಾಬ್ ನಾಯಕತ್ವದಿಂದ ಮಯಾಂಕ್ ಅಗರ್ವಾಲ್ ಗೆ ಕೊಕ್? ನಿಜಾಂಶವೇನು?

ಬುಧವಾರ, 24 ಆಗಸ್ಟ್ 2022 (16:51 IST)
ಮುಂಬೈ: ಮುಂದಿನ ಐಪಿಎಲ್ ಸೀಸನ್ ಗೆ ಕೋಚ್ ಅನಿಲ್ ಕುಂಬ್ಳೆ ಬದಲಾವಣೆ ಸುದ್ದಿ ಬೆನ್ನಲ್ಲೇ ನಾಯಕ ಮಯಾಂಕ್ ಅಗರ್ವಾಲ್ ಗೂ ಕಿಂಗ್ಸ್ ಪಂಜಾಬ್ ತಂಡ ಕೊಕ್ ನೀಡಲಿದೆ ಎಂಬ ಸುದ್ದಿ ಕೇಳಿಬರುತ್ತಿತ್ತು.

ಈ ಬಗ್ಗೆ ಈಗ ಪಂಜಾಬ್ ಸ್ಪಷ್ಟನೆ ನೀಡಿದೆ. ಮಯಾಂಕ್ ರನ್ನು ಕಿತ್ತೊಗೆದು ಆ ಸ್ಥಾನಕ್ಕೆ ಜಾನಿ ಬೇರ್ ಸ್ಟೋಗೆ ನಾಯಕತ್ವ ನೀಡಲಾಗುತ್ತದೆ ಎಂದು ಸುದ್ದಿ ಹಬ್ಬಿತ್ತು.

ಆದರೆ ಇದೆಲ್ಲಾ ಸುಳ್ಳು. ನಾಯಕತ್ವ ಬದಲಾವಣೆ ಬಗ್ಗೆ ನಾವು ಯಾವುದೇ ನಿರ್ಧಾರ ಮಾಡಿಲ್ಲ ಎಂದು ಪಂಜಾಬ್ ತಂಡ ಸ್ಪಷ್ಟನೆ ನೀಡಿದೆ. ಕಳೆದ ಆವೃತ್ತಿಯಲ್ಲಷ್ಟೇ ಮಯಾಂಕ್ ತಂಡದ ನಾಯಕರಾಗಿ ನೇಮಕಗೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ