ಕಿಂಗ್ಸ್ ಪಂಜಾಬ್ ಕೋಚ್ ಸ್ಥಾನದಿಂದ ಅನಿಲ್ ಕುಂಬ್ಳೆಗೆ ಕೊಕ್?

ಶುಕ್ರವಾರ, 19 ಆಗಸ್ಟ್ 2022 (09:00 IST)
ಮುಂಬೈ: ಮುಂಬರುವ ಐಪಿಎಲ್ ನಿಂದ ಕಿಂಗ್ಸ್ ಪಂಜಾಬ್ ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆಗೆ ಕೊಕ್ ನೀಡಲು ಫ್ರಾಂಚೈಸಿ ಚಿಂತನೆ ನಡೆಸಿದೆ ಎಂಬ ಸುದ್ದಿಯಿದೆ.

ಅನಿಲ್ ಕುಂಬ್ಳೆ ಜೊತೆಗಿನ ಮೂರು ವರ್ಷದ ಗುತ್ತಿಗೆ ಮುಕ್ತಾಯಗೊಳ್ಳುತ್ತಿದೆ. ಆದರೆ ಕುಂಬ್ಳೆ ಕೋಚ್ ಆಗಿ ಇದುವರೆಗೆ ಪಂಜಾಬ್ ಪ್ಲೇ ಆಫ್ ಹಂತಕ್ಕೇರಲು ಸಾಧ‍್ಯವಾಗಿಲ್ಲ. ಹೀಗಾಗಿ ‍ಫ್ರಾಂಚೈಸಿ ಕೋಚ್ ಬದಲಾವಣೆಗೆ ನಿರ್ಧರಿಸಿದೆ.

ಈಗಾಗಲೇ ಕೆಕೆಆರ್ ಮಾಜಿ ನಾಯಕ ಇಯಾನ್ ಮಾರ್ಗನ್, ಟ್ರೆವರ್ ಬೇಲಿಸಿಸ್ ಅವರನ್ನು ಕೋಚ್ ಹುದ್ದೆಗೆ ಕರೆತರಲು ಪಂಜಾಬ್ ಪ್ರಯತ್ನ ನಡೆಸಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ