ಬೆಂಗಳೂರು: ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಕಾಮನ್ ಸೆನ್ಸ್ ಇಲ್ಲ ಎಂದು ರೇಗಿದ ಆರ್ ಅಶೋಕ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಪ್ರಶ್ನೆ ಎಲೆಕ್ಷನ್ ಕಮಿಷನ್ ವಿರುದ್ಧ, ಅದಕ್ಕೆ ಬಿಜೆಪಿ ನಾಯಕರು ಯಾಕೆ ಪ್ರತಿಕ್ರಿಯಿಸುತ್ತಿದ್ದಾರೆ. ಏನ್ ಇವರೆಲ್ಲಾ ವಕ್ತಾರಾಗಿದ್ದಾರಾ ಎಂದು ಅಶೋಕ್ ವಿರುದ್ಧ ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಕಾಮನ್ ಸೆನ್ಸ್ ಬಗ್ಗೆ ಮಾತನಾಡುವ ಆರ್ ಅಶೋಕ್ ಅವರು ಭಾರೀ ಸಾಮಾನ್ಯ ಪ್ರಜ್ಞೆಯಿಟ್ಟುಕೊಂಡು ಮಾತನಾಡುತ್ತಿದ್ದಾರಾ ಎಂದರು.
ನೀವು ಮೊದಲು ಸಾಮಾನ್ಯ ಜ್ಞಾನವಿಟ್ಟುಕೊಂಡು ಮಾತನಾಡಲು ಕಲಿಯಿರಿ. ನಾವು ಪುರಾವೆಗಳನ್ನು ಇಟ್ಟುಕೊಂಡೆ ಮಾತನಾಡುತ್ತಿದ್ದೇವೆ.
2023ರಲ್ಲಿ ಬಿಆರ್ ಪಾಟೀಲ್ ಅವರು ಈ ವಿಚಾರ ಬಗ್ಗೆ ಧ್ವನಿ ಎತ್ತಿದ್ದರು. ಕೇಂದ್ರದ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗಲೇ ಈ ವಿಚಾರದ ಬಗ್ಗೆ ತನಿಖೆ ಶುರುವಾಗಿದ್ದು. ಆ ಸಂದರ್ಭಧಲ್ಲಿ ಏನ್ ನೀವು ಕತ್ತೆ ಕಾಯ್ತಾ ಇದ್ರಾ. ಮಾತು ಎತ್ತಿದ್ರೆ ರಾಹುಲ್ ಗಾಂಧಿ ಕಾಮನ್ ಸೆನ್ಸ್ ಬಗ್ಗೆ ಮಾತನಾಡುವ ಬಿಜೆಪಿಯವರು ನಿಮ್ಮದೇ ಸರ್ಕಾರವಿರುವಾಗ ಎಲ್ಲಿ ಹೋಗಿದ್ರಿ ಎಂದು ಪ್ರಶ್ನೆ ಮಾಡಿದರು.
ಇದೀಗ ಎಲೆಕ್ಷನ್ ಕಮಿಷನ್ ಅವರು ಮಾಹಿತಿಯನ್ನು ಕೊಡಲು ಭಯಪಡುತ್ತಿದ್ದಾರೆ.