ಮೇಕೆದಾಟು ವಿಚಾರಣೆ ಮುಂದೂಡಿದ ಸುಪ್ರೀಂ

ಮಂಗಳವಾರ, 11 ಜನವರಿ 2022 (13:12 IST)
ನವದೆಹಲಿ: ಮೇಕೆದಾಟು ಆಣೆಕಟ್ಟು ನಿರ್ಮಾಣ ವಿರೋಧಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ.

ಈ ಪ್ರಕರಣ ವಿಚಾರಣೆಯನ್ನು ಜನವರಿ 25ರಂದು ನಡೆಸಲಾಗುವುದು ಎಂದು ನ್ಯಾ.ಎ.ಎಂ.ಖಾನ್ವಿಲ್ಕರ್ ನೇತೃತ್ವದ ತ್ರಿ ಸದಸ್ಯ ಪೀಠ ಹೇಳಿದೆ. ತಮಿಳುನಾಡು ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆ ಇಂದು ನಡೆಯಬೇಕಿತ್ತು. ವಿಚಾರಣೆ ನಡೆಯಬೇಕಿದ್ದ ಅರ್ಜಿ, ಮುಲ್ಲೈ ಪೆರಿಯಾರ್ ಆಣೆಕಟ್ಟು ಸುರಕ್ಷತೆ ಸಂಬಂಧಿಸಿದ ಪ್ರಕರಣವೊಂದರ ಜೊತೆಗೆ ಸುಪ್ರೀಂಕೋರ್ಟ್ ಟ್ಯಾಗ್ ಮಾಡಿತ್ತು.

ಇಂದು ವಿಚಾರಣೆ ವೇಳೆ ಕರ್ನಾಟಕ ಮತ್ತು ತಮಿಳುನಾಡು ಪರ ವಾದ ಮಂಡಿಸಿದ ವಕೀಲರು ಮುಲ್ಲೈ ಪೆರಿಯಾರ್ ಮತ್ತು ಮೇಕೆದಾಟಿಗೂ ಯಾವುದೇ ಸಂಬಂಧ ಇಲ್ಲ ಎರಡು ಅರ್ಜಿಗಳು ಪ್ರತ್ಯೇಕ ವಿಚಾರಣೆ ನಡೆಯಬೇಕು ಎಂದು ಮನವಿ ಮಾಡಿದರು.

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಸಮಗ್ರ ಯೋಜನಾ ವರದಿ(ಡಿಪಿಆರ್)ಗೆ ಕೇಂದ್ರ ತಾತ್ವಿಕ ಒಪ್ಪಿಗೆ ನೀಡಿದ ಬಳಿಕ ಯೋಜನೆ ವಿರೋಧಿಸಿ ತಮಿಳುನಾಡು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಯೋಜನೆಗೆ ಅನುಮತಿ ನೀಡದಂತೆ ಕೇಂದ್ರಕ್ಕೆ ಸೂಚಿಸಲು ಮನವಿ ಮಾಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ