ಖಾಸಗೀಕರಣಗೊಳಿಸುವ ವೈಷ್ಣವ್ ಯೋಜನೆ ಸರ್ಕಾರಕ್ಕಿಲ್ಲ

ಶನಿವಾರ, 26 ಮಾರ್ಚ್ 2022 (07:51 IST)
ನವದೆಹಲಿ : ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದರು.

ರಾಜ್ಯಸಭೆಯಲ್ಲಿ ರೈಲ್ವೆ ಬಜೆಟ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸದ್ಯ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ. 

2009-14ರ ಅವಧಿಯಲ್ಲಿ ರೈಲ್ವೆಯ ವಾರ್ಷಿಕ ಹೂಡಿಕೆ 45,980 ಕೋಟಿ ರೂ.ಗಳಷ್ಟಿತ್ತು. ಬಿಜೆಪಿ ಸರ್ಕಾರ ಅದನ್ನು 2014ರಲ್ಲಿ 99,511 ಕೋಟಿಗಳಿಗೆ ದ್ವಿಗುಣಗೊಳಿಸಿದೆ. ಅಲ್ಲದೆ, ಬಜೆಟ್ ಗಾತ್ರವೂ 2,45,800 ಕೋಟಿಗೆ ಹೆಚ್ಚಿದೆ.

ಇದೇ ವೇಳೆ ಬುಲೆಟ್ ಟ್ರೇನ್, ಕುರಿತು ಪ್ರಸ್ತಾಪಿಸಿದ ಅವರು, ಈಗಾಗಲೇ ೨೫ ದೇಶಗಳು ಹೈಸ್ಪೀಡ್ ಟ್ರೇನ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಜಪಾನ್ನಲ್ಲಿ `ಇ-3′ ಸಿರೀಸ್ ಟ್ರೇನ್ ಚಾಲ್ತಿಯಲ್ಲಿದ್ದು, ಅದನ್ನು ಭಾರತಕ್ಕೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ವಿವರಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ