ಅತ್ಯಾಚಾರ ಮಾಡಿದ ವಿಡಿಯೋ ತೋರಿಸಿ ಯುವತಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಕಾಮುಕ

ಗುರುವಾರ, 21 ಫೆಬ್ರವರಿ 2019 (06:16 IST)
ಪಾಟ್ನಾ : ಯುವಕನೊಬ್ಬ ಅತ್ಯಾಚಾರ ಮಾಡಿದ ವಿಡಿಯೋ ತೋರಿಸಿ ಬೆದರಿಸಿ ಯುವತಿಯೊಬ್ಬಳ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಘಟನೆ ಪಾಟ್ನಾದಲ್ಲಿ ನಡೆದಿದೆ.


ಯುವಕನೊಬ್ಬ ಜನವರಿ 18 ರಂದು ಯುವತಿ ಶೌಚಾಲಯಕ್ಕೆ ಹೋದಾಗ ಆಕೆಯನ್ನು ಅಪಹರಿಸಿ ಅತ್ಯಾಚಾರವೆಸಗಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾನೆ. ನಂತರ ಆ ವಿಡಿಯೋ ತೋರಿಸಿ ಆಕೆಗೆ ಬ್ಲಾಕ್ಮೇಲ್ ಮಾಡಿ ಪ್ರತಿ ದಿನ ರಾತ್ರಿ ಮನೆಗೆ ಬರುವಂತೆ ಹೆದರಿಸುತ್ತಿದ್ದನಂತೆ. ಅಷ್ಟಕ್ಕೆ ಸುಮ್ಮನಾಗದ ಆತ ನಂತರ ಯುವತಿಯನ್ನು ಇಬ್ಬರು ಯುವಕರಿಗೆ ಮಾರಾಟ ಮಾಡಿದ್ದಾನೆ.


ಆ ಯುವಕರು ಆಕೆಯನ್ನು ರೈಲಿನಲ್ಲಿ ಬೇರೆ ಕಡೆ ಸಾಗಿಸುತ್ತಿದ್ದಾಗ ಅವರಿಂದ ಹೇಗೋ ತಪ್ಪಿಸಿಕೊಂಡು ಬಂದ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ