ಆರೋಪಿ ಹಾಗೂ ಮೃತ ಬಾಲಕಿ ತಂದೆ ಸ್ನೇಹಿತರಾಗಿದ್ದ ಕಾರಣ ಆಗಾಗ ಬಾಲಕಿಯ ಮನೆಗೆ ಬರುತ್ತಿದ್ದ ಆತ ಸ್ನೇಹಿತನ ಪತ್ನಿ ಮೇಲೆ ಕಣ್ಣು ಹಾಕಿದ್ದ. ಒಮ್ಮೆ ಸ್ನೇಹಿತನ ಪತ್ನಿಯ ಬಳಿ ಆತ ಒಂದು ರಾತ್ರಿ ಕಳೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಆತನಿಗೆ ಅವಮಾನ ಮಾಡಿದ್ದಳಂತೆ.
ಆಕೆ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಆತ ಆಕೆಯ ಮಗಳಿಗೆ ಚಾಕೋಲೇಟ್ ಕೊಡುವ ನೆಪ ಹೇಳಿ ಮನೆಗೆ ಕರೆದುಕೊಂಡು ಹೋಗಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದಾನೆ. ಮಗಳನ್ನು ಹುಡುಕುತ್ತ ಮಹಿಳೆ ಈತನ ಮನೆಗೆ ಬಂದಾಗ ಆತನ ನೀಚ ಕೃತ್ಯ ಕಂಡು ದಂಗಾಗಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.