ರೀಲ್ಸ್ ಮಾಡಲು ಬಿಡದ ಪತಿಯನ್ನು ಕೊಂದು ನೇತು ಹಾಕಿದ ಪತ್ನಿ!
ಬಿಹಾರ-ರೀಲ್ಸ್ ಮಾಡ್ತಿದ್ದ ಪತ್ನಿಗೆ ರೀಲ್ಸ್ ಮಾಡಬೇಡ ಅಂತಾ ಪತಿ ಹೇಳಿದ್ದಕ್ಕೆ ಆತನನ್ನು ಕೊಂದಿದ್ದಲ್ಲದೆ, ಆತನ ಹೆಣವನ್ನು ನೇತು ಹಾಕಿರುವ ಘಟನೆ ಬಿಹಾರದ ಬೇಗುಸರಾಯ್‌ನಲ್ಲಿ ನಡೆದಿದೆ.ಮೃತ ದುರ್ದೈವಿ ಕಾರ್ಮಿಕ ಮಹೇಶ್ ಎನ್ನಲಾಗಿದ್ದು ಅತ್ತೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ಇನ್ನು ಪತ್ನಿ ರಾಣಿಯನ್ನು ಈಗಾಗಲೇ ಬಂಧಿಸಲಾಗಿದೆ ಆದರೆ ಆಕೆಯ ಸಂಬಂಧಿಕರು ತಲೆಮರೆಸಿಕೊಂಡಿದ್ದಾರೆ ಎಂದು SHO ಮಿಥಿಲೇಶ್ ಕುಮಾರ್ ತಿಳಿಸಿದ್ದಾರೆ.