ಮುಟ್ಟಿನ ವೇಳೆ ಪ್ಯಾಡ್ ಬದಲು ಬಟ್ಟೆ ಧರಿಸಿ ಪ್ರಾಣಕ್ಕೆ ಕುತ್ತು ತಂದುಕೊಂಡ ಮಹಿಳೆ

ಗುರುವಾರ, 14 ಮಾರ್ಚ್ 2019 (06:57 IST)
ಪುಣೆ : ಮುಟ್ಟಿನ ಸಮಯದಲ್ಲಿ ಮಹಿಳೆಯರು ಬಟ್ಟೆಯ ಬದಲು ಸ್ಯಾನಿಟರಿ ಪ್ಯಾಡ್ ಬಳಸಿ ಎಂದು ದೇಶದಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದರೂ ಕೂಡ ಇದೀಗ ಪುಣೆಯಲ್ಲಿ  ಮಹಿಳೆಯೊಬ್ಬಳು  ಮುಟ್ಟಿನ ವೇಳೆ ಬಟ್ಟೆ ಧರಿಸಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

ಹೌದು. 28 ವರ್ಷದ ಮಹಿಳೆಯೊಬ್ಬಳು ತೀವ್ರ ಹೊಟ್ಟೆ ನೋವು, ಕಡಿಮೆ ರಕ್ತದೊತ್ತಡ ಹಾಗೂ ಜ್ವರದಿಂದ ಪುಣೆಯ ಆಸ್ಪತ್ರೆಗೆ ದಾಖಲಾಗಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ. ತನಿಖೆ ವೇಳೆ ಆಕೆಯ ಸಾವಿಗೆ ಮುಟ್ಟಿನ ಬಟ್ಟೆ ಕಾರಣ ಎಂಬುದು ಗೊತ್ತಾಗಿದೆ.

 

ಮಹಿಳೆ ಮುಟ್ಟಿನ ವೇಳೆ ಒಂದೇ ಬಟ್ಟೆಯನ್ನು ಪದೇ ಪದೇ ಬಳಸಿದ್ದಾಳೆ. ಇದರಿಂದ ಬ್ಯಾಕ್ಟೀರಿಯಾ ಸೋಂಕು ಉಂಟಾಗಿ ಮಹಿಳೆಗೆ ಮಾರಣಾಂತಿಕ ಕಾಯಿಲೆ ಟಿ ಎಸ್ ಎಸ್ ಶುರುವಾಗಿದೆ. ಇದರಿಂದ ಆಕೆಯ ಸ್ಥಿತಿ ಗಂಭೀರವಾಗಿದ್ದು, ಭಯಗೊಂಡಿದ್ದ ಆಕೆಗೆ ರಕ್ತದೊತ್ತಡ ಕಡಿಮೆಯಾಗಿ ಸಾವನಪ್ಪಿದ್ದಾಳೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ