ಸ್ಯಾನಿಟರಿ ಪ್ಯಾಡ್ ಬಳಸುವ ಮೊದಲು ಮಹಿಳೆಯರು ಈ ಸಂಗತಿ ಗಮನಿಸಲೇಬೇಕು

ಸೋಮವಾರ, 11 ಮಾರ್ಚ್ 2019 (17:37 IST)
ಬೆಂಗಳೂರು: ಋತುಮತಿಯಾಗುವ ಮಹಿಳೆಯ ಬಹುಮುಖ್ಯ ಸಂಗಾತಿ ಎಂದರೆ ಸ್ಯಾನಿಟರಿ ಪ್ಯಾಡ್ ಗಳು. ಇದರ ಬಗ್ಗೆ ಸಿನಿಮಾವೇ ಬಂದಿದೆ. ಆದರೆ ಸ್ಯಾನಿಟರಿ ಪ್ಯಾಡ್ ಬಳಸುವ ಮೊದಲು ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಒಳಿತು.


ನೈಸರ್ಗಿಕವೇ?
ನ್ಯಾಚುರಲ್ ಎಂದು ಪ್ಯಾಕೆಟ್ ಮೇಲೆ ಬರೆದ ಮಾತ್ರಕ್ಕೆ ಆ ಉತ್ಪನ್ನ ನ್ಯಾಚುರಲ್ ಆಗಿರಬೇಕೆಂದಿಲ್ಲ. ಸರಿಯಾಗಿ ಪರೀಕ್ಷಿಸಿ, ತಿಳಿದುಕೊಂಡೇ ಖಚಿತಪಡಿಸಿಕೊಳ್ಳಿ. ಆದಷ್ಟು ನ್ಯಾಚುರಲ್ ಪ್ಯಾಡ್ ಗಳ ಬಳಕೆ ಮಾಡುವುದು ಉತ್ತಮ.

ಸುರಕ್ಷತೆ ಮತ್ತು ಶುಚಿತ್ವ
ಮುಟ್ಟಿನ ದಿನಗಳಲ್ಲಿ ಪ್ರಯಾಣ ಮಾಡಬೇಕಾಗಿ ಬಂದಾಗ ಸ್ಯಾನಿಟರಿ ಪ್ಯಾಡ್ ಗಳನ್ನು ಜತೆಗೆ ಒಯ್ಯಬೇಕಾದರೆ, ಅದನ್ನು ಬಿಸಾಕಬೇಕಾದರೆ ಪ್ರತ್ಯೇಕ ಕವರ್ ಮಾಡಿ. ಶುಚಿತ್ವ ತುಂಬಾ ಮುಖ್ಯ.

ಪರಿಸರ ಸ್ನೇಹಿ ಪ್ಯಾಡ್ ಗಳು
ಸ್ಯಾನಿಟರಿ ಪ್ಯಾಡ್ ಗಳನ್ನು ಬಿಸಾಕುವಾಗ ಅಥವಾ ಬೆಂಕಿಗೆ ಹಾಕುವಾಗ ಪರಿಸರ ಹಾನಿ ಉಂಟುಮಾಡುವಂತಹ ಪ್ಯಾಡ್ ಗಳನ್ನು ಬಳಸಬೇಡಿ. ಪರಿಸರ ಸ್ನೇಹಿ ಪ್ಯಾಡ್ ಗಳಿಗೆ ಆದ್ಯತೆ ನೀಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ