ಕಡಿಮೆ ಬಡ್ಡಿ ದರದಲ್ಲಿ ಸಾಲದ ಆಮಿಷವೊಡ್ಡಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಯುವಕ

ಗುರುವಾರ, 17 ಜನವರಿ 2019 (06:39 IST)
ನವದೆಹಲಿ :  24 ವರ್ಷದ ಯುವತಿಯೊಬ್ಬಳಿಗೆ ಮತ್ತು ಬರುವ ಔಷಧ  ಬೇರೆಸಿದ ಜ್ಯೂಸ್  ಕುಡಿಸಿ  ಆಕೆಯ ಸ್ನೇಹಿತ ಮತ್ತು ಆತನ  ಇಬ್ಬರು ಸ್ನೇಹಿತರು ಸೇರಿ ಕಾರಿನೊಳಗೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಪೂರ್ವ ದೆಹಲಿಯ ಶಹ್ದಾರಾದಲ್ಲಿ ನಡೆದಿದೆ.


ಉತ್ತರ ಪ್ರದೇಶದ ಅಮಿತ್ (30) ಆರೋಪಿಗಳಲ್ಲಿ ಒಬ್ಬನಾಗಿದ್ದು, ಈತ ಯುವತಿಗೆ ಕಳೆದ ಎರಡು ತಿಂಗಳ ಹಿಂದೆ ಪರಿಚಯವಾಗಿದ್ದರು. ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಸೋಮವಾರ ರಾತ್ರಿ ಆಕೆಯನ್ನು ಕ್ರಾಸ್ ರಿವರ್ ಮಾಲ್ ಬಳಿ ಬರಲು ಹೇಳಿ  ಮತ್ತು ಬರುವ ಔಷಧ ಬೇರೆಸಿದ ಜ್ಯೂಸ್ ಕುಡಿಸಿ ಮೂವರು ಸೇರಿ ಕಾರಿನೊಳಗೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.


ಘಟನೆ ನಡೆದ ಬಳಿಕ ಆಕೆ ಅಳುತ್ತಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರಿಗೆ ಯುವತಿ ನಡೆದ ಘಟನೆಯನ್ನು ತಿಳಿಸಿದ್ದಾಳೆ. ಈ ಕುರಿತು ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಅಮಿತ್ ನನ್ನು ಬಂಧಿಸಿದ್ದು  ಮತ್ತಿಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ