ಆಗಸ್ಟ್ ನಲ್ಲಿ ಅಪ್ಪಳಿಸಲಿದೆ ಕೊರೊನಾ 3ನೇ ಅಲೆ: ತಜ್ಞರ ವರದಿ

ಸೋಮವಾರ, 5 ಜುಲೈ 2021 (15:29 IST)
ಈಗಷ್ಟೇ ಕೊರೊನಾ ಎರಡನೇ ಅಲೆಯ ಅಟ್ಟಹಾಸದಿಂದ ನಲುಗಿದ್ದ ಭಾರತ ಚೇತರಿಸಿಕೊಳ್ಳುತ್ತಿರುವ ನಡುವೆ ತಜ್ಞರ ಸಮಿತಿ ಇದೀಗ ಮುಂದಿನ ತಿಂಗಳು ಕೊರೊನಾ ಮೂರನೇ ಅಲೆ ಅಪ್ಪಳಿಸಲಿದ್ದು, ಸೆಪ್ಟೆಂಬರ್ ವೇಳೆ ಗರಿಷ್ಠ ಪ್ರಮಾಣ ತಲುಪಲಿದೆ ಎಂದು ಹೇಳಿದೆ.
ಎಸ್ ಬಿಐ ಈ ಹಿಂದೆ ಏಪ್ರಿಲ್ ನಲ್ಲಿ ಎರಡನೇ ಅಲೆ ಆಗಮಿಸಲಿದ್ದು, ಮೇ ನಲ್ಲಿ ಗರಿಷ್ಠ ಪ್ರಮಾಣಕ್ಕೆ ತಲುಪಲಿದೆ ಎಂದು ಹೇಳಿತ್ತು. ವರದಿಯಂತೆ ಮೇ ತಿಂಗಳಲ್ಲಿ ಉಷ್ಕ್ರಾಯ ಸ್ಥಿತಿ ತಲುಪಿದ್ದ ಕೊರೊನಾ ನಂತರ ಕಡಿಮೆ ಆಗುತ್ತಾ ಬಂದಿತ್ತು.
ಈಗಿನ ಪರಿಸ್ಥಿತಿ ಗಮನಿಸಿದರೆ ಗರಿಷ್ಠ ಅಂದರೆ ಪ್ರತಿನಿತ್ಯ 10 ಸಾವಿರ ಸೋಂಕು ಪ್ರಕರಣಗಳು ಬರಬಹುದು. ಆಗಸ್ಟ್ ನಂತರ ಸೋಂಕು ಪ್ರಮಾಣದಲ್ಲಿ ಹೆಚ್ಚಳ ಕಂಡು ಬರಲಿದೆ ಎಂದು ವರದಿ ಮುನ್ನೆಚ್ಚರಿಕೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ