ತಂದೆಯ ಆತ್ಮಚರಿತ್ರೆ ಬಿಡುಗಡೆಗಾಗಿ ಪ್ರಣಬ್ ಮುಖರ್ಜಿ ಮಕ್ಕಳ ಕಿತ್ತಾಟ

ಬುಧವಾರ, 16 ಡಿಸೆಂಬರ್ 2020 (09:47 IST)
ನವದೆಹಲಿ: ದಿವಂಗತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡುವ ವಿಚಾರವಾಗಿ ಅವರ ಪುತ್ರ ಅಭಿಜಿತ್ ಮುಖರ್ಜಿ ಮತ್ತು ಪುತ್ರಿ ಶರ್ಮಿಷ್ಟ ಮುಖರ್ಜಿ ನಡುವೆ ಕಿತ್ತಾಟ ನಡೆದಿದೆ.


‘ದಿ ಪ್ರೆಸಿಡೆಂಟ್ ಇಯರ್ಸ್’ ಎಂಬ ಪ್ರಣಬ್ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡುತ್ತಿರುವ ಪ್ರಕಾಶಕ ರೂಪ ಪಬ್ಲಿಕೇಷನ್ಸ್ ಗೆ ಪುಸ್ತಕ ಹೊರತರದಂತೆ ಪುತ್ರ ಅಭಿಜಿತ್ ತಾಕೀತು ಮಾಡಿದ್ದಾರೆ. ಆದರೆ ಪುತ್ರಿ ಶರ್ಮಿಷ್ಟ ಇದರ ಬಗ್ಗೆ ಅನಗತ್ಯ ವಿವಾದ ಮಾಡಬೇಡ. ಪುಸ್ತಕ ಬಿಡುಗಡೆಯಾಗಲಿ ಎಂದು ಆಗ್ರಹಿಸಿದ್ದಾರೆ. ಕೆಲವು ವಿಚಾರಗಳನ್ನು ನಮ್ಮ ಅನುಮತಿಯಿಲ್ಲದೇ ಪುಸ್ತಕದಲ್ಲಿ ಬಳಸಲಾಗಿದೆ. ಇದರ ಬಗ್ಗೆ ಈಗಾಗಲೇ ಮಾಧ‍್ಯಮಗಳಲ್ಲಿ ವರದಿಯಾಗಿದೆ. ಅವರ ಪುತ್ರನಾಗಿ ಈ ಪುಸ್ತಕ ಬಿಡುಗಡೆಯಾಗುವ ಮೊದಲು ನಾನು ಇದನ್ನು ಓದಬೇಕು. ಒಂದು ವೇಳೆ ತಂದೆ ಪ್ರಣಬ್ ಬದುಕಿದ್ದರೂ ಇದನ್ನೇ ಮಾಡುತ್ತಿದ್ದರು ಎಂದಿದ್ದಾರೆ. ಆದರೆ ಪುತ್ರಿ ಶರ್ಮಿಷ್ಟ ಪ್ರಕಾಶಕರ ಪರ ನಿಂತಿದ್ದು, ನಾನು ಪ್ರಣಬ್ ಪುತ್ರಿಯಾಗಿ ಹೇಳುತ್ತಿದ್ದೇನೆ, ನನ್ನ ಸಹೋದರ ಈ ಪುಸ್ತಕದ ವಿಚಾರವಾಗಿ ಅನಗತ್ಯ ವಿವಾದ ಮಾಡುವುದು ಬೇಡ. ನಮ್ಮ ತಂದೆ ಅನಾರೋಗ್ಯಕ್ಕೀಡಾಗುವ ಮೊದಲೇ ಇದನ್ನು ಬರೆದುಮುಗಿಸಿದ್ದರು. ಈ ಪುಸ್ತಕ ಬಿಡುಗಡೆಯಾಗಲಿ ಎಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ