ಮಸೀದಿ ನಿರ್ಮಾಣಕ್ಕೆ ಹಣ ನೀಡಿ, ನಮಾಜ್ ಮಾಡಲು ಅವಕಾಶ ಕೊಟ್ಟ ಅಯೋಧ್ಯೆ ದೇವಾಲಯ
ಗುರುವಾರ, 1 ಸೆಪ್ಟಂಬರ್ 2016 (19:37 IST)
ಕೋಮುಸಾಮರಸ್ಯಕ್ಕೆ ಅತ್ಯುತ್ತಮ ಉದಾಹರಣೆ ನೀಡಿದ ಅಯೋಧ್ಯೆಯಲ್ಲಿರುವ ದೇವಾಲಯ, 400 ವರ್ಷಗಳಷ್ಟು ಹಳೆಯದಾದ ಮಸೀದಿ ನಿರ್ಮಾಣಕ್ಕಾಗಿ ಹಣ ನೀಡಿದ್ದಲ್ಲದೇ ನಮಾಜ್ ಮಾಡಲು ಮುಸ್ಲಿಂ ಬಾಂಧವರಿಗೆ ಅವಕಾಶ ನೀಡಿದ ಅಪರೂಪದ ಘಟನೆ ವರದಿಯಾಗಿದೆ.
ಕಳೆದ 1992ರಲ್ಲಿ ಅಯೋಧ್ಯೆಯಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ದೇಶಾದ್ಯಂತ ಕೋಮುಗಲಭೆಯನ್ನು ಸೃಷ್ಟಿಸಿ ನೂರಾರು ಜನರನ್ನು ಬಲಿಪಡೆದಿತ್ತು.
ಅಯೋಧ್ಯೆಯಲ್ಲಿರುವ ಹನುಮಾನ ಗಢಿ ದೇವಾಲಯದ ಟ್ರಸ್ಟ್, ವಿನಾಶಗೊಂಡ ಆಲಂಗಿರಿ ಮಸೀದಿ ಪುನರ್ ನಿರ್ಮಾಣಕ್ಕಾಗಿ ಆರ್ಥಿಕ ನೆರವು ನೀಡಲು ಒಪ್ಪಿಕೊಂಡಿದೆ.
ನಮ್ಮ ವೆಚ್ಚದಲ್ಲಿ ಮಸೀದಿ ಪುನರ್ ನಿರ್ಮಾಣ ಮಾಡುವಂತೆ ಮುಸ್ಲಿಂ ಸಹೋದರರಲ್ಲಿ ಕೋರಿದ್ದಲ್ಲದೇ ನಮಾಜ್ ಮಾಡಲು ಹಿಂದೂ ದೇವಾಲಯದಿಂದ ಯಾವುದೇ ಆಕ್ಷೇಪವಿಲ್ಲ ಎನ್ನುವ ಪ್ರಮಾಣ ಪತ್ರ ನೀಡಲು ಸಮ್ಮತಿ ಸೂಚಿಸಿದ್ದೇವೆ ಎಂದು ಹನುಮಾನಗಢಿ ದೇವಾಲಯ ಟ್ರಸ್ಟ್ ಮುಖ್ಯಸ್ಥ ಮಹಾಂತ ಗ್ಯಾನ್ ದಾಸ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ