1.5 ತಿಂಗಳು ನಿರಂತರ ಉರಿಯಲಿದೆ ಈ ಅಗರಬತ್ತಿ

geetha

ಗುರುವಾರ, 18 ಜನವರಿ 2024 (18:22 IST)
ಅಯೋಧ್ಯೆ-ಅಯೋಧ್ಯೆಯ ರಾಮ ಜನ್ಮಭೂಮಿಗೆ ಗುಜರಾತ್‌ನ ವಡೋದರಾದಿಂದ ಬಂದಿದ್ದ ಬೃಹತ್ ಅಗರಬತ್ತಿಗೆ ಟ್ರಸ್ಟ್‌ನ ಮಹಾಂತ ನೃತ್ಯ ಗೋಪಾಲ್ ದಾಸ  ಅಗ್ನಿಸ್ಪರ್ಶ ಮಾಡಿದ್ದಾರೆ. ಈ ಅಗರಬತ್ತಿ ಒಮ್ಮೆ ಹಚ್ಚಿದರೆ ಸುತ್ತಲಿನ 50 ಕಿ.ಮೀ. ವರೆಗೆ ಸುವಾಸನೆ ಬೀರುತ್ತದೆ ಹಾಗೂ ಒಂದುವರೆ  ತಿಂಗಳು ಉರಿಯುತ್ತದೆ. ಈ ಅಗರಬತ್ತಿಯ ತಯಾರಿಕೆಯಲ್ಲಿ  ಅಂಟು,ಗೋವಿನ ಸಗಣಿ,ಹಸುವಿನ ತುಪ್ಪ,ಗಿಡಮೂಲಿಕೆಗಳನ್ನು ಬಳಸಲಾಗಿದೆ  ಅಂತಾ ಮೂಲಗಳು ಹೇಳಿವೆ.

ಅಯೋಧ್ಯೆಯಲ್ಲಿ 5 ಶತಮಾನಗಳ ಬಳಿಕ ರಾಮಮಂದಿರ ನಿರ್ಮಾಣವಾಗುತ್ತಿರುವ ಸಮಯದಲ್ಲಿ ಜನ ರಾಮನ ಬಗ್ಗೆ ಕಿರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು ಎಂದು ರಾಮಮಂದಿರ ಟ್ರಸ್ಟ್ ಸಲಹೆ ನೀಡಿದೆ. ವಿಡಿಯೋದಲ್ಲಿ ರಾಮನ ಬಗೆಗಿನ ಹಾಡು, ನೃತ್ಯ, ಕಿರು ನಾಟಕ, ಮಾತು, ಹೀಗೆ ನಿಮಗನಿಸಿದ್ದನ್ನು ವಿಡಿಯೋ ಮಾಡಿ  #ShriRam Homecoming ಎಂಬ ಹ್ಯಾಷ್‌ ಟ್ಯಾಗ್ ಜೊತೆಗೆ ಹಂಚಿಕೊಳ್ಳಲು ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ