ದಸರಾ ಹಬ್ಬದಲ್ಲಿ ದುರ್ಗಾ ಮಾತೆಯನ್ನು ಪೂಜಿಸುವ ಮುಸ್ಲಿಂ ಸಮುದಾಯ
ಸೋಮವಾರ, 3 ಅಕ್ಟೋಬರ್ 2016 (14:31 IST)
ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಸಾರುವಂತಹ ಘಟನೆಯೊಂದು ರಾಜಧಾನಿಯಲ್ಲಿ ನಡೆದಿದೆ. ಮುಸ್ಲಿಮ ಸಮುದಾಯದ ವ್ಯಕ್ತಿಯಾದ ಇರ್ಶಾದ್ ಅಲಿ, ಪ್ರತಿ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ದುರ್ಗೆ ಮಾತೆಯನ್ನು ಪೂಜಿಸುವುದನ್ನು ಮುಂದುವರಿಸಿದ್ದಾರೆ.
ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಲಿ, ನವರಾತ್ರಿಯ ಸಂದರ್ಭದಲ್ಲಿ ಮುಸ್ಲಿಮ ಬಾಹುಳ್ಯ ಚೌಕ್ ಪ್ರದೇಶದಲ್ಲಿರುವ ಕಾಲಿ ಬಡಿ ದೇವಾಲಯದಲ್ಲಿ ದುರ್ಗಾ ಮಾತೆಯನ್ನು ಪೂಜಿಸುತ್ತಾರೆ.
ಕಳೆದ 14 ವರ್ಷಗಳಿಂದ ದುರ್ಗಾ ಮಾತೆಯನ್ನು ಪೂಜಿಸುತ್ತಿದ್ದೇನೆ. ನನಗೆ ಸಮಯ ದೊರೆತಾಗ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತೇನೆ. ದುರ್ಗಾ ಮಾತೆ ನಮಗೆ ಜನ್ಮ ನೀಡಿದ ತಾಯಿಯಾಗಿದ್ದಾಳೆ ಎಂದು ತಿಳಿಸಿದ್ದಾರೆ.
ಪ್ರಾಚಿನ ದುರ್ಗಾ ಮಾತೆ ದೇವಾಲಯದಲ್ಲಿ ಕೇವಲ ಅಲಿ ಮಾತ್ರವಲ್ಲ. ಇತರ ಮುಸ್ಲಿಮ್ ಸಮುದಾಯದ ಜನರು ಕೂಡಾ ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ಪೂಜೆ ಸಲ್ಲಿಸುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ