ಲಕ್ನೋ : ಪಾಕಿಸ್ತಾನದಲ್ಲಿರುವ ತನ್ನ ಹ್ಯಾಂಡ್ಲರ್ಗಳಿಗೆ ಭಾರತೀಯ ಸೇನೆಯ ಬಗ್ಗೆ ಪ್ರಮುಖ ಮಾಹಿತಿಗಳನ್ನ ರಹಸ್ಯವಾಗಿ ತಲುಪಿಸುತ್ತಿದ್ದ ಆರೋಪದ ಮೇಲೆ ಭಾನುವಾರ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಶಂಕಿತ ಐಎಸ್ಐ ಏಜೆಂಟ್ನನ್ನ ಬಂಧಿಸಿದೆ.
ಶಂಕಿತ ISI ಏಜೆಂಟ್ನನ್ನ ಮೊಹಮ್ಮದ್ ರಯೀಸ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಗೊಂಡಾದ ತರಬ್ಗಂಜ್ ಪ್ರದೇಶದ ನಿವಾಸ ಮೊಹಮ್ಮದ್ ರಯೀಸ್ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾಗ ಅರ್ಮಾನ್ ಎಂಬಾತನ ಸಂಪರ್ಕಕ್ಕೆ ಬಂದಿದ್ದಾನೆ.
ಭಾರತದಲ್ಲಿ ಮುಸ್ಲಿಂ ಸಮುದಾಯದ ಸದಸ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಅರ್ಮಾನ್ ತನ್ನನ್ನ ಪ್ರಚೋದಿಸಲು ಪ್ರತ್ನಿಸಿರುವುದಾಗಿ ರಯೀಸ್ ಎಂದು ತಿಳಿಸಿದ್ದಾರೆ.