ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ; ಗ್ರಾಹಕರ ಪಜೀತಿ

ಶನಿವಾರ, 10 ಡಿಸೆಂಬರ್ 2016 (16:07 IST)
ಇಂದು, ನಾಳೆ ಮತ್ತು ಮಂಗಳವಾರ ಬ್ಯಾಂಕ್‌ಗಳಿಗೆ ರಜೆ ಇದ್ದು ದೇಶಾದ್ಯಂತ ನಗದು ಬಿಕ್ಕಟ್ಟು ಹೆಚ್ಚಿಸಲಿದೆ. ಕಳೆದ ಒಂದು ತಿಂಗಳಿಂದ ಹಣ ಪಡೆದುಕೊಳ್ಳಲು ಪರದಾಡುತ್ತಿರುವ ಗ್ರಾಹಕರಿಗೆ ಈ ಮೂರು ದಿನಗಳ ಸಾಲು ಸಾಲು ರಜೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 
ತಿಂಗಳ ಒಂದರಿಂದ 10ನೇ ತಾರೀಕು ಸಂಬಳದ ದಿನಗಳಾಗಿದ್ದು, ಇಂದು ಎರಡನೆಯ ಶನಿವಾರದ ರಜೆ, ನಾಳೆ ಭಾನುವಾರ ರಜಾ ದಿನ. ಸೋಮವಾರ ಬ್ಯಾಂಕ್ ಓಪನ್ ಆಗಲಿದೆಯಾದರೂ ಮಂಗಳವಾರ ಮುಸ್ಲಿಂ ಬಾಂಧವರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮತ್ತೆ ರಜೆ ಬರಲಿದೆ. ಇದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. 
 
ಸಾಮಾನ್ಯ ಪರಿಸ್ಥಿತಿಗಳಲ್ಲಿ ರಜಾ ದಿನಗಳಲ್ಲಿ ಎಟಿಎಂ ನಿರ್ವಹಣೆ ಹೊಣೆ ಹೊತ್ತಿರುವ ಸಂಸ್ಥೆಗಳಿಗೆ ಹಣ ಪೂರೈಸಿ ಎಟಿಎಂಗಳಲ್ಲಿ ಹಣವಿರುವಂತೆ ನೋಡಿಕೊಳ್ಳಲಾಗುತ್ತಿತ್ತು. ಆದರೆ ಈಗ ಹಣದ ಕೊರತೆ ಇರುವುದರಿಂದ ದಿನಕ್ಕೆ ಸಾಕಾಗುವಷ್ಟು ಹಣ ನೀಡಲಾಗುತ್ತಿಲ್ಲ ಮತ್ತೆ ಹೆಚ್ಚುವರಿ ಹಣವನ್ನು ನೀಡಲು ಹೇಗೆ ಸಾಧ್ಯ ಎಂದು ಖಾಸಗಿ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ