ಕಲ್ಕತ್ತಾ: ದೇಶದಲ್ಲಿ ಹುಲಿ ಸಂಖ್ಯೆ ಕ್ಷೀಣಿಸುತ್ತಿದೆ ಅನ್ನೋ ಸುದ್ದಿ ಹೊರಬೀಳುತ್ತಿದ್ದಂತೆ ಪ್ರಾಣಿ ಪ್ರಿಯರಲ್ಲಿ ಆತಂಕ ಶುರುವಾಗಿತ್ತು. ಇದೀಗ ಆ ಆತಂಕ ಸ್ವಲ್ಪ ದೂರಾಗುವ ಸುದ್ದಿಯೊಂದು ಹೊರಬಿದ್ದಿದೆ.
ಸುಂದರ್ಬನ್ಸ್ ಹುಲಿ ರಕ್ಷಿತಾರಣ್ಯದಲ್ಲಿ ಕಳೆದ ಬಾರಿಗಿಂತ ಈ ಬಾರಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಕ್ಯಾಮರಾ ಟ್ರಾಪ್ ಮೂಲಕ ಹುಲಿ ಸರ್ವೇ ನಡೆಸಿದ ವೈಲ್ಡ್ ಲೈಫ್ ಇನ್ಸ್ಟ್ಯೂಟ್ ಆಫ್ ಇಂಡಿಯಾ ಸಂಸ್ಥೆಗೆ ಖುಷಿ ವಿಚಾರ ಸಿಕ್ಕಂತಾಗಿದೆ.
2015 ರಲ್ಲಿ ಕೇವಲ 76 ಇದ್ದ ಹುಲಿಗಳು ಈ ಬಾರಿ 85ಕ್ಕೆ ಏರಿಕೆಯಾಗಿದೆ. ಈ ಬಾರಿ ನೂತನ ಮಾದರಿಯ ತಂತ್ರಜ್ಞಾನ ಬಳಸಿ ಹುಲಿಗಳ ಸರ್ವೇ ಮಾಡಲಾಗಿದೆ. ಜೊತೆಗೆ ಈ ಹಿಂದೆ ನಡೆಸಿದ ಕೆಲ ಸರ್ವೇಗಳಲ್ಲಿ ಹುಲಿ ಸಂಖ್ಯೆ ಹೆಚ್ಚು ಕಡಿಮೆ ಕಂಡುಬಂದಿತ್ತು.
ಸದ್ಯ ಸುಂದರ್ಬನ್ಸ್ ಕಾಡಿನಲ್ಲಿ ಹುಲಿಗಳಿಗೆ ಬೇಕಾದ ಹಾಗೂ ಸಂತಾನೋತ್ಪತ್ತಿಗೆ ಸಹಕಾರಿಯಾಗುವ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ ಬೇಟೆಗಾರರ ಸಂಖ್ಯೆ ಹತೋಟಿಗೆ ತರಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ