ಇದು ಸೇನಾಪಡೆಯನ್ನು ಬೆಂಬಲಿಸುವ ಸಮಯ, ಸೀಮಿತ ದಾಳಿ ರಾಜಕೀಯಗೊಳಿಸುವುದಲ್ಲ: ಕಾಂಗ್ರೆಸ್

ಬುಧವಾರ, 5 ಅಕ್ಟೋಬರ್ 2016 (19:04 IST)
ಭಯೋತ್ಪಾದಕರ ವಿರುದ್ಧ ಸಮರ ಸಾರಿರುವ ಭಾರತೀಯ ಸೇನಾಪಡೆಗಳನ್ನು ಬೆಂಬಲಿಸುವ ಅಗತ್ಯವಿದೆಯೇ ಹೊರತು ಸೀಮಿತ ದಾಳಿಯನ್ನು ರಾಜಕಾರಣಗೊಳಿಸುವುದಲ್ಲ ಎಂದು ಕಾಂಗ್ರೆಸ್ ಪುನರುಚ್ಚರಿಸಿದೆ.
 
ಸೈನಿಕರ ತ್ಯಾಗವನ್ನು ರಾಜಕೀಯಗೊಳಿಸುತ್ತಿರುವ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮತ್ತು ಇತರ ಸಚಿವರು ಅನಾಗರಿಕ ವರ್ತನೆಗೆ ಬಿಜೆಪಿ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದೆ. 
 
ಇಂತಹ ಸವಾಲಿನ ಸಂದರ್ಭದಲ್ಲಿ ಉಗ್ರರ ವಿನಾಶದಲ್ಲಿ ತೊಡಗಿರುವ ಸೇನಾಪಡೆಗಳನ್ನು ಸಂಪೂರ್ಣ ದೇಶ ಒಕ್ಕೊರಲಿನಿಂದ ಬೆಂಬಲ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಆರ್‌.ಪಿ.ಎನ್‌.ಸಿಂಗ್ ಕರೆ ನೀಡಿದ್ದಾರೆ.
 
ಕೇವಲ ರಾಜಕೀಯ ಬೆಳೆಯನ್ನು ಬೇಯಿಸಿಕೊಳ್ಳಲು ಬಿಜೆಪಿ ಸೀಮಿತ ದಾಳಿಯ ಬಗ್ಗೆ ಪದೇ ಪದೇ ಪ್ರಸ್ತಾಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ದೇಶದ ಭದ್ರತೆಯ ದೃಷ್ಟಿಯಿಂದ ಪಾಕಿಸ್ತಾನದ ಹೇಯ ಕೃತ್ಯವನ್ನು ಖಂಡಿಸಿ ತಕ್ಕ ಉತ್ತರ ನೀಡಬೇಕಾಗಿದೆ. ಕೇಂದ್ರ ಸರಕಾರ ಎಲ್ಲಾ ಸಾಕ್ಷ್ಯಾಧಾರಗಳನ್ನು, ಮಾಹಿತಿಗಳನ್ನು ಮತ್ತು ಅಡಳಿತವನ್ನು ಬಳಸಿಕೊಂಡು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ವಕ್ತಾರ ಆರ್‌ಪಿಎನ್ ಸಿಂಗ್ ಕೋರಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ