ಶಶಿಕಲಾಗೆ ಶಾಕ್ ನೀಡಿದ ರಾಜ್ಯಪಾಲ

ಶನಿವಾರ, 11 ಫೆಬ್ರವರಿ 2017 (10:25 IST)
ಮುಖ್ಯಮಂತ್ರಿ ಪದವಿಗೇರಲು ಕಾದು ಕುಳಿತಿರುವ ಜಯಾ ಆಪ್ತೆ ಶಶಿಕಲಾ ನಟರಾಜನ್ ಅವರಿಗೆ  ರಾಜ್ಯಪಾಲ ಸಿ.ವಿದ್ಯಾಸಾಗರರಾವ್ ಶಶಿಕಲಾ ನಟರಾಜನ್ ಶಾಕ್ ನೀಡಿದ್ದಾರೆ. ಅಕ್ರಮ ಆಸ್ತಿ ಪ್ರಕರಣದ ತೀರ್ಪು ಬರುವವರೆಗೂ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಕಾಯುವಂತೆ ಶಶಿಕಲಾ ಅವರಿಗೆ ರಾವ್ ಸೂಚನೆ ನೀಡಿದ್ದು, ಪನ್ನಿರ್ ಸೆಲ್ವಂ ಅವರನ್ನು ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ನಿರ್ದೇಶನ ನೀಡಿದ್ದಾರೆ.

ದಿವಂಗತ ಜೆ. ಜಯಲಲಿತಾ, ಶಶಿಕಲಾ ಸೇರಿದಂತೆ ನಾಲ್ವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಸದ್ಯವೇ ಬರುವ ನಿರೀಕ್ಷೆ ಇದ್ದು ಸಿಎಂ ಆಗಿ ಅಧಿಕಾರ ಸ್ವೀಕರಿಸುವಂತೆ ಶಶಿಕಲಾ ಅವರನ್ನು ಆಹ್ವಾನಿಸದಿರಲು ರಾವ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. 
 
ಇನ್ನು ರಾಜ್ಯಪಾಲ ವಿದ್ಯಾಸಾಗರ್ ರಾವ್ ಕೇಂದ್ರಕ್ಕೆ ವರದಿ ಸಲ್ಲಿಸಿದ್ದು, ಶಶಿಕಲಾ ಅವರನ್ನು ಸರಕಾರ ರಚಿಸಲು ಆಹ್ವಾನಿಸಲು ಸಾಧ್ಯವಿಲ್ಲ ಎಂದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ಎಂಬ ವರದಿಗಳನ್ನು ರಾಜಭವನ ತಳ್ಳಿ ಹಾಕಿದೆ. ಆ ರೀತಿಯ ಯಾವ ವರದಿಯನ್ನೂ ರಾಜ್ಯಪಾಲರು ಕೇಂದ್ರಕ್ಕೆ ಸಲ್ಲಿಸಿಲ್ಲ ಎಂದು ತಮಿಳುನಾಡಿನ ರಾಜಭವನದಿಂದಲೇ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ