ಪ್ರಧಾನಿ ಮೋದಿ ಇಮೇಜ್‌ ಉಳಿಸಲು ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಅನಿವಾರ್ಯ

ಗುರುವಾರ, 5 ಜನವರಿ 2017 (14:01 IST)
ದೇಶಾದ್ಯಂತ ಆಘಾತ ಮೂಡಿಸಿದ ನೋಟು ನಿಷೇಧದ ನಂತರ ನಡೆಯಲಿರುವ ಪಂಚರಾಜ್ಯಗಳ ಚುನಾವಣೆ ಫಲಿತಾಂಶ,ಪ್ರಧಾನಿ ಮೋದಿಯ ನೋಟು ನಿಷೇಧಕ್ಕೆ ಜನಾಭಿಪ್ರಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
 
ಕೇಂದ್ರ ಚುನಾವಣೆ ಆಯೋಗ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೆ ದಿನಾಂಕ ಪ್ರಕಟಿಸಿದ್ದು, ಮೋದಿ ಸರಕಾರ ಅಧಿಕಾರವಧಿಯ ಅರ್ಧದಷ್ಟು ಅಧಿಕಾರ ಪೂರೈಸಿದ ಸಂದರ್ಭದಲ್ಲಿ ಚುನಾವಣೆ ಎದುರಾಗಿರುವುದು ಬಿಜೆಪಿಗೆ ಮಹತ್ವದ್ದಾಗಿದೆ.
 
ನೋಟು ನಿಷೇಧದಿಂದ ದೇಶದ ಸಾಮಾನ್ಯ ಜನತೆ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ವಿಪಕ್ಷಗಳು ಒಂದಾಗಿ ಕೇಂದ್ರ ಸರಕಾರವನ್ನು ಹಣಿಯುವ ಸುವರ್ಣವಕಾಶ ಒದಗಿ ಬಂದಿದೆ.
 
ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಬಿಜೆಪಿ ಚುನಾವಣೆಯ ಜಯ ಮೋದಿ ಸರಕಾರಕ್ಕೆ ವರದಾನವಾಗಲಿದ್ದು ಮುಂಬರುವ 2019 ರ ಚುನಾವಣೆಗೆ ಸಿದ್ದತೆಗೊಳ್ಳಲು ನೈತಿಕ ಬಲ ದೊರೆತಂತಾಗುತ್ತದೆ.
 
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೋಟು ನಿಷೇಧ ಮಾನವ ನಿರ್ಮಿತ ದುರಂತ ಎಂದು ವಾಗ್ದಾಳಿ ನಡೆಸಿದ್ದರೆ, ಕಾಂಗ್ರೆಸ್ ಪಕ್ಷಧ ಉಪಾಧ್ಯಕ್ಷ ರಾಹುಲ್ ಗಾಂಧಿ ನೋಟು ನಿಷೇಧ ಕಪ್ಪು ಹಣದ ಮತ್ತು ಭ್ರಷ್ಟಾಚಾರದ ವಿರುದ್ಧವಲ್ಲ ಬಡವರ ಲೂಟಿಗಾಗಿ ಜಾರಿಗೊಳಿಸಲಾಗಿದೆ ಎನ್ನುವ ಟೀಕೆಯ ಮಧ್ಯೆಯೂ ಬಿಜೆಪಿ ಜಯಗಳಿಸಲಿದೆ ಎನ್ನುವುದು ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ.
 
2014ರಲ್ಲಿ ನಡೆದ ಲೋಕಸಭೆ ಚುನಾವಣೆಯ ಭರ್ಜರಿ ಗೆಲುವಿನ ನಂತರ 2015ರಲ್ಲಿ ಮೋದಿ ನೇತೃತ್ವದ ಬಿಜೆಪಿ, ಬಿಹಾರ್ ಚುನಾವಣೆಯಲ್ಲಿ ಸೋಲನುಭವಿಸಿತ್ತು. ಅದೇ ವರ್ಷ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲೂ ಹೀನಾಯ ಸೋಲನುಭವಿಸಿ ಮುಖಭಂಗವಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ