ಕೆರಳಿದ ಅರವಿಂದ್ ಕೇಜ್ರಿವಾಲ್ ಟಾಂಗ್ ಕೊಟ್ಟಿದ್ದು ಯಾರಿಗೆ…?

ಗುರುವಾರ, 25 ಜನವರಿ 2018 (16:36 IST)
ನವದೆಹಲಿ : ಗುರುಗ್ರಾಮದಲ್ಲಿ ಶಾಲಾ ಮಕ್ಕಳ ವಾಹನದ ಮೇಲೆ ಪದ್ಮಾವತ್ ಚಿತ್ರ ಪ್ರತಿಭಟನಾಕಾರರು ದಾಳಿ ನಡೆಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಈ ದಾಳಿಯನ್ನು ತೀವ್ರವಾಗಿ ಖಂಡಿಸಬೇಕು ಎಂದು ಹೇಳಿದ್ದಾರೆ.


ದಿಲ್ಲಿಯ ಉತ್ತರ ಛತ್ರಶಾಲಾ ಸ್ಟೇಡಿಯಂ ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು’ ನಾನು ಎಲ್ಲರಲ್ಲೂ ವಿನಂತಿ ಮಾಡುತ್ತೇನೆ. ನಾವಿನ್ನು ಮೂಕರಾಗಿರಲು ಸಾಧ್ಯವಿಲ್ಲ. ಈ ದಾಳಿಕೋರರು ಮುಸ್ಲಿಂರನ್ನು ಕೊಂದವರು. ದಲಿತರನ್ನು ಸಜೀವ ದಹನ ಮಾಡಿದವರು. ಚಚ್ಚಿ ಕೊಂದವರು. ಇವತ್ತು ಅವರು ನಮ್ಮ ಮಕ್ಕಳ ಮೇಲೆ ಕಲ್ಲು ಹೊಡೆಯುತ್ತಿದ್ದಾರೆ. ನಮ್ಮ ಮನೆಗೆ ನುಗ್ಗಿ ಬಂದು ನಮ್ಮ ಮೇಲೆ ದಾಳಿಗೆ ಮುಂದಾಗಿದ್ದಾರೆ. ಹಾಗಿರುವಾಗ ಇನ್ನು ಯಾರೂ ಮೂಕರಾಗಿರಬಾರದು. ಇಂತಹ ದಾಳಿಗಳನ್ನು ಖಂಡಿಸಿ ಮಾತನಾಡಲೇಬೇಕು’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ