ಪಿಎಂ ಮೋದಿ ಸಂಪುಟದ ಸಚಿವರಿಂದ ಇಂದು ಅಧಿಕಾರ ಸ್ವೀಕಾರ

Krishnaveni K

ಮಂಗಳವಾರ, 11 ಜೂನ್ 2024 (10:07 IST)
Photo Credit: X
ನವದೆಹಲಿ: ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸೇರಿರುವ ನೂತನ ಸಚಿವರು ಇಂದು ತಮ್ಮ ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಲಿದ್ದಾರೆ. ರಾಜ್ಯದಿಂದ ಇಬ್ಬರು ನಾಲ್ವರಿಗೆ ಮಂತ್ರಿ ಪದವಿ ದೊರಕಿದೆ.

ನಿನ್ನೆ ಎಲ್ಲಾ ಸಚಿವರ ಖಾತೆ ವಿವರ ಪ್ರಕಟಿಸಲಾಗಿತ್ತು. ಅದರಂತೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿಗೆ ಬೃಹತ್ ಕೈಗಾರಿಕೆ, ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಗೆ ಮತ್ತೆ ಹಣಕಾಸು ಸಚಿವಾಲಯ, ಶೋಭಾ ಕರಂದ್ಲಾಜೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಖಾತೆ, ವಿ ಸೋಮಣ್ಣಗೆ ಕೇಂದ್ರ ಜಲಶಕ್ತಿ, ರೈಲ್ವೇ ಸಹಾಯಕ ಖಾತೆ ಸಚಿವ ಸ್ಥಾನ ನೀಡಲಾಗಿದೆ.

ನಿನ್ನೆ ಸಚಿವ ಸ್ಥಾನ ಹಂಚಿಕೆಯಾದ ಬೆನ್ನಲ್ಲೇ ಎಚ್ ಡಿ ಕುಮಾರಸ್ವಾಮಿ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ತಕ್ಷಣವೇ ಮುಂದಿನ ಯೋಜನೆಗಳ ಬಗ್ಗೆ 15 ದಿನದಲ್ಲಿ ನೀಲನಕ್ಷೆ ತಯಾರಿಸಿಕೊಡಲು ತಾಕೀತು ಮಾಡಿದ್ದರು. ಇಂದು ಕುಮಾರಸ್ವಾಮಿ ಅಧಿಕೃತವಾಗಿ ತಮ್ಮ ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಲಿದ್ದಾರೆ. ಇಂದು ಬಹುತೇಕ ಸಚಿವರು ತಮ್ಮ ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಮೊನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದ ಪ್ರಧಾನಿ ಮೋದಿ ನಿನ್ನೆಯೇ ತಮ್ಮ ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಿದ್ದರು. ಅಲ್ಲದೆ, ಮೊದಲ ಆದೇಶಕ್ಕೂ ಸಹಿ ಹಾಕಿದ್ದರು. ಇದಾದ ಬಳಿಕ ಮೋದಿ ತಮ್ಮ ಸಚಿವ ಸಂಪುಟ ಸದಸ್ಯರೊಂದಿಗೆ ಸಭೆ ನಡೆಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ