ಇಂದು ಶ್ರೀಗಳಿಗೆ ಡಾ. ರವೀಂದ್ರ ಹಾಗೂ ರೇಲಾ ತಂಡದಿಂದ ಶಸ್ತ್ರಚಿಕಿತ್ಸೆ
ಶನಿವಾರ, 8 ಡಿಸೆಂಬರ್ 2018 (09:16 IST)
ಚೆನ್ನೈ : ಸಿದ್ಧಗಂಗಾ ಶ್ರೀಗಳು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿರುವ ಹಿನ್ನಲೆಯಲ್ಲಿ ಚೆನ್ನೈನ ರೇಲಾ ಇನ್ ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್ ಗೆ ದಾಖಲಿಸಿದ್ದು, ಇಂದು ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಡಾ. ಮೊಹಮದ್ ರೇಲಾ ನೇತೃತ್ವದಲ್ಲಿ ಶ್ರೀಗಳಿಗೆ ವೈದ್ಯಕೀಯ ತಪಾಸಣೆ ನಡೆಸಿ, ನಂತರ ಶ್ರೀಗಳಿಗೆ ಚಿಕಿತ್ಸೆ ನೀಡುವ ಕುರಿತು ತಜ್ಞ ವೈದ್ಯರ ಜೊತೆ ಚರ್ಚೆ ನಡೆಸಿದೆ. ಪಿತ್ತಕೋಶದ ಸಮಸ್ಯೆಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕು. ಶ್ರೀಗಳಿಗೆ ಯಾವ ಮಾದರಿಯ ಚಿಕಿತ್ಸೆ ನೀಡಬೇಕೆಂಬುದರ ಬಗ್ಗೆ ಡಾ. ರವೀಂದ್ರ ಹಾಗೂ ರೇಲಾ ತಂಡದವರು ಚರ್ಚೆ ನಡೆಸಿದ್ದಾರೆ.
ಈಗಾಗಲೇ ಡಾ.ರವೀಂದ್ರ ಅವರು ಚೆನ್ನೈಆಸ್ಪತ್ರೆಗೆ ತಲುಪಿದ್ದು, ಇದೀಗ ವೈದ್ಯಕೀಯ ತಪಾಸಣೆ ಹಾಗೂ ಚರ್ಚೆಯ ಬಳಿಕ ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.