ಹುತಾತ್ಮರಾಗುವ ಬದಲಿಗೆ ವಿರೋಧಿಗಳನ್ನು ಕೊಂದುಹಾಕಿ: ಸೇನೆಗೆ ಮನೋಹರ್ ಪರಿಕ್ಕರ್ ಆದೇಶ

ಸೋಮವಾರ, 21 ನವೆಂಬರ್ 2016 (13:40 IST)
ಭಯೋತ್ಪಾದಕರು ಗುಂಡು ಹಾರಿಸುವವರೆಗೆ ಕಾದು ಹುತಾತ್ಮರಾಗಲು ಕಾಯಬೇಡಿ. ಉಗ್ರರನ್ನು ಕಂಡ ಕೂಡಲೇ ಗುಂಡಿನ ದಾಳಿ ನಡೆಸಿ ಎಂದು ಕಾಶ್ಮಿರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸೇನೆಗೆ ಆದೇಶ ನೀಡಿರುವುದಾಗಿ ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
 
ಬಿಜೆಪಿ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು, ನಾನು ರಕ್ಷಣಾ ಸಚಿವನಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊಟ್ಟ ಮೊದಲಿಗೆ ಮಾಡಿದ ಕೆಲಸವೆಂದರೆ, ಯಾರೊಬ್ಬರ ಕೈಯಲ್ಲಿ ಮಷಿನ್ ಗನ್ ಅಥವಾ ರಿವಾಲ್ವರ್ ಕಂಡಲ್ಲಿ ಅವರು ಹಾರಿಸುವವರೆಗೆ ಕಾಯಬೇಡಿ. ಹುತಾತ್ಮರಾಗುವ ಮುಂಚೆಯೇ ಎದುರಾಳಿಯನ್ನು ಕೊಂದು ಹಾಕಿ ಎಂದು ಸೇನೆಗೆ ಆದೇಶ ನೀಡಿರುವುದಾಗಿ ತಿಳಿಸಿದ್ದಾರೆ.
 
ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಉಗ್ರರು ಗುಂಡುಹಾರಿಸುವವರೆಗೆ ನೀವು ಗುಂಡು ಹಾರಿಸಬೇಡಿ ಎಂದು ಸೇನೆಗೆ ಆದೇಶ ನೀಡಿತ್ತು. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ ಸೇನೆಯ ನೈತಿಕತೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
 
ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ, ಪಾಕ್‌ಗೆ ತಕ್ಕ ಪ್ರತ್ಯುತ್ತರ ನೀಡುವಂತೆ ಆದೇಶ ನೀಡಿದ್ದೇನೆ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ