ಕೇಂದ್ರ ಸರಕಾರಿ ನೌಕರರ ಒಕ್ಕೂಟದಿಂದ ನಾಳೆ ಭಾರತ್ ಬಂದ್

ಗುರುವಾರ, 1 ಸೆಪ್ಟಂಬರ್ 2016 (16:24 IST)
ಕೇಂದ್ರ ಸರಕಾರ ಘೋಷಿಸಿದ ವೇತನ ಹೆಚ್ಚಳ ನಿಗದಿತಗಿಂತ ಕಡಿಮೆಯಾಗಿದೆ. ಕೂಡಲೇ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೇಂದ್ರ ಸರಕಾರಿ ನೌಕರರ ಒಕ್ಕೂಟ ನಾಳೆ ಭಾರತ್ ಬಂದ್‌ಗೆ ಕರೆ ನೀಡಿದೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ವೇತನ ಹೆಚ್ಚಳದಲ್ಲೂ ತಾರತಮ್ಯ ಎಸಗಿದೆ ಎಂದು ನೌಕರರ ಒಕ್ಕೂಟ ಆರೋಪಿಸಿದೆ.
 
ಕೇಂದ್ರ ಸರಕಾರಿ ನೌಕರರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸರಕಾರಿ ಕಚೇರಿಗಳು ಸೇರಿದಂತೆ,  ಶಾಲಾ ಕಾಲೇಜು, ಸಾರಿಗೆ ಸಂಚಾರ ಸೇರಿದಂತೆ ಮೆಟ್ರೋ ಸಂಚಾರದ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 
 
ವಾಹನ ಸಂಚಾರ ವ್ಯವಸ್ಥೆಯ ಮೇಲೆ ತೀವ್ರ ತೆರನಾದ ಪರಿಣಾಮ ಬೀರಲಿರುವುದರಿಂದ ಪ್ರಯಾಣಿಕರು ಮುನ್ನೆಚ್ಚರಿಕೆಯ ಕ್ರಮವನ್ನು ಅನುಸರಿಸಬೇಕು ಎಂದು ಕೇಂದ್ರ ಸರಕಾರಿ ನೌಕರರ ಒಕ್ಕೂಟ ಕರೆ ನೀಡಿದೆ. 
 
ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ  6 ಗಂಟೆವರೆಗೆ ಮುಷ್ಕರ ನಡೆಯಲಿದ್ದು, ಸಂಚಾರ ಸೇರಿದಂತೆ ಇತರ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ ಎಂದು ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ