ಉತ್ತರಾಖಂಡ್`ನ ಸಿಎಂ ಆಗಿ ತ್ರಿವೇಂದ್ರ ಸಿಂಗ್ ರಾವತ್ ಪದಗ್ರಹಣ

ಶನಿವಾರ, 18 ಮಾರ್ಚ್ 2017 (17:22 IST)
ಉತ್ತರಾಖಂಡ್`ನ ಮುಖ್ಯಮಂತ್ರಿಯಾಗಿ ಬಿಜೆಪಿಯ ತ್ರಿವೇಂದ್ರ ಸಿಂಗ್ ರಾವತ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗವರ್ನರ್ ಕೆ.ಕೆ. ಪೌಲ್ ಪ್ರತಿಜ್ಞಾವಿಧಿ ಬೋಧಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದ ಬಿಜೆಪಿ 70 ಕ್ಷೇತ್ರಗಳ ಪೈಕಿ 57 ಸ್ಥಾನಗಳನ್ನ ಗೆದ್ದು ಸ್ಪಷ್ಟ ಬಹುಮತ ಪಡೆದಿತ್ತು.

ಪ್ರಧಾನಮಂತ್ರಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ಗಣ್ಯರು ಪ್ರಮಾಣವಚನ ಸಮಾರಂಭಕ್ಕೆ ಸಾಕ್ಷಿಯಾದರು. ರಾವತ್ ಜೊತೆ 9 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸತ್ಪಾಲ್ ಮಹಾರಾಜ್, ಹರಕ್ ಸಿಂಗ್ ರಾವತ್, ಮದನ್ ಕೌಶಿಕ್, ಅರವಿಂದ್ ಪಾಂಡೇ, ಸುಭೋದ್ ಉನಿಯಾಲ್, ಯಶ್ ಪಾಲ್ ಆರ್ಯ, ಪ್ರಕಾಶ್ ಪಂತ್ ಪ್ರಮಾಣವಚನ ಸ್ವೀಕರಿಸಿದ ಪ್ರಮುಖರು.

ತ್ರಿವೇಂದ್ರ ಸಿಂಗ್ ರಾವತ್ ಕಾಂಗ್ರೆಸ್ ಅಭ್ಯರ್ಥಿ ಹೀರಾ ಸಿಂಗ್ ಅವರನ್ನ 24000 ಮತಗಳ ಅಂತರದಿಂದ ಸೋಲಿಸಿದ್ದರು. 

ವೆಬ್ದುನಿಯಾವನ್ನು ಓದಿ