ಟ್ರಕ್ ಮತ್ತು ಟೆಂಪೋ ಮುಖಾಮುಖಿ ಡಿಕ್ಕಿ; 12 ಮಂದಿ ಸ್ಥಳದಲ್ಲೇ ಸಾವು

ಭಾನುವಾರ, 23 ಫೆಬ್ರವರಿ 2020 (12:22 IST)
ಗುಜರಾತ್ : ಟ್ರಕ್ ಮತ್ತು ಟೆಂಪೋ ಮುಖಾಮುಖಿ ಡಿಕ್ಕಿಯಾದ ಪರಿಣಾಮ  12 ಮಂದಿ ಸಾವನಪ್ಪಿದ ಘಟನೆ ಗುಜರಾತ್ ನ ವಡೋದರಾದಲ್ಲಿ ನಡೆದಿದೆ.



ಗುಜರಾತ್ ನ ವಡೋದರ ಜಿಲ್ಲೆಯ ಮಹುವಾಡ ಗ್ರಾಮದ ಬಳಿ ಅತಿಯಾಗಿ ವೇಗವಾಗಿ ಬಂದ  ಟ್ರಕ್ ಮತ್ತು ಟೆಂಪೋ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಪರಿಣಾಮ 12 ಮಂದಿ ಸ್ಥಳದಲ್ಲೇ ಸಾವನಪ್ಪಿದ್ದಾರೆ.


ಅಲ್ಲದೇ  ಹಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ