ಜಿ.ಎಸ್.ಟಿ ಅನುಷ್ಠಾನದಿಂದ ನೂರಾರು ಕೋಟಿ ನಷ್ಟ!

ಬುಧವಾರ, 6 ಜುಲೈ 2022 (15:23 IST)
ಬೆಂಗಳೂರು : ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಕೊಡಬೇಕಿದ್ದ ನೂರಾರು ಕೋಟಿ ರೂಪಾಯಿ ಉSಖಿ ಹಣ ಬಿ.ಬಿ.ಎಂ.ಪಿ.ಯಲ್ಲಿ ವಂಚಿಸಿರುವ ಬೃಹತ್ ಹಗರಣ.

ಜಿ.ಎಸ್.ಟಿ.ನಿರ್ವಹಣೆಯಲ್ಲಿ ವಿಫಲರಾಗಿರುವುದರ ಬಗ್ಗೆ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಮ್ಯಾನೇಜಿಂಗ್ ಟ್ರಸ್ಟಿ ಬಿ. ಹೆಚ್. ವೀರೇಶ್  ಮಾಹಿತಿ ನೀಡಿದ್ದಾರೆ.

ಮಹಾನಗರ ಪಾಲಿಕೆಯಲ್ಲಿ ಜಿ.ಎಸ್.ಟಿ. ಕಾನೂನಿನ ಅಸಮರ್ಪಕ ಅನುಷ್ಠಾನದಿಂದ ಪಾಲಿಕೆಗೆ ಮತ್ತು ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ನಷ್ಟ ತಡೆಯುವ ಬಗ್ಗೆ. ಮಹಾನಗರ ಪಾಲಿಕೆ ಹೊರಡಿಸಿರುವ ಸುತ್ತೋಲೆ ನಂ. ಮುಲೆಪ ಪಿ.ಆರ್./ಜಿ.ಎಸ್.ಟಿ.-01/17-18, 2017ರ ಜೂನ್ 21ರಂದು ಸೂಚಿಸಿರುವಂತೆ ಬಿಲ್ಗಳನ್ನು ಪಾವತಿಸುವಾಗ ಈ ಕೆಳಕಂಡ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುತ್ತದೆ.

2017ರ ಜುಲೈ 1ರ ನಂತರ ಅನ್ವಯವಾಗುವಂತೆ ನಿರ್ವಹಿಸುವ ಕಾಮಗಾರಿಗಳಿಗೆ/ಸರಬರಾಜುಗಳಿಗೆ ಗುತ್ತಿಗೆದಾರರಿಂದ ಕಾಯಿದೆಯಲ್ಲಿ ನಿಗದಿಪಡಿಸಿರುವ ಮಾನದಂಡದಂತೆ Invoice (ಬಿಲ್)ನ್ನು ನೀಡಲು ಸಂಬಂಧಪಟ್ಟ ಗುತ್ತಿಗೆದಾರರಿಗೆ/ಸರಬರಾಜುದಾರರಿಗೆ ಸೂಚಿಸಬೇಕಾಗಿದೆ.

ಎಲ್ಲ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ C. C. Bill ಜೊತೆಯಲ್ಲಿ ಕಾಯಿದೆಯಲ್ಲಿ ನಿಗದಿ ಪಡಿಸಿರುವ ಕ್ರಮಾಂಕಿತ ಗುತ್ತಿಗೆದಾರರ Invoice (ಬಿಲ್)ನ್ನು ಗುತ್ತಿಗೆದಾರರಿಂದ ಪಡೆಯಬೇಕು. ಸದರಿ Invoice (ಬಿಲ್)ನಲ್ಲಿ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಯ ವೆಚ್ಚದ ಮೊತ್ತ SGST ಮತ್ತು CGST ಪ್ರತ್ಯೇಕವಾಗಿ ವಿಂಗಡಿಸಿ . ಕಾಮಗಾರಿಗಳಿಗೆ ಮುಂಗಡ ಹಣ ಪಾವತಿಸುವ ಸಂದರ್ಭದಲ್ಲೂ ಸಹ ಮೇಲಿನಂತೆ ಕ್ರಮವಹಿಸಬೇಕಾಗಿತ್ತು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ