ಅಡುಗೆ ಎಣ್ಣೆ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಸೂಚನೆ

ಗುರುವಾರ, 7 ಜುಲೈ 2022 (10:46 IST)
ನವದೆಹಲಿ : ಅಡುಗೆ ಎಣ್ಣೆಯ ಬೆಲೆಯು ಒಂದು ವಾರದಲ್ಲಿ ಪ್ರತಿ ಲೀಟರ್ಗೆ 10 ರಿಂದ 15 ರೂಪಾಯಿವರೆಗೆ ಇಳಿಕೆಯಾಗಲಿದೆ.
 
ಒಂದು ವಾರದಲ್ಲಿ ಎಂಆರ್ಪಿಯನ್ನು ಇಳಿಸುವಂತೆ ಅಡುಗೆ ಎಣ್ಣೆ ತಯಾರಿಕ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ದೇಶಕ್ಕೆ ಅಗತ್ಯವಿರುವ ಅಡುಗೆ ಎಣ್ಣೆಯಲ್ಲಿ ಶೇ 60ರಷ್ಟು ವಿದೇಶಗಳಿಂದ ಆಮದಾಗುತ್ತದೆ. ಅಡುಗೆ ಎಣ್ಣೆ ತಯಾರಕ ಕಂಪನಿಗಳು ಹಿಂದಿನ ತಿಂಗಳು ಎಂಆರ್ಪಿಯನ್ನು ಲೀಟರ್ಗೆ 10 ರಿಂದ 15ರವರೆಗೆ ತಗ್ಗಿಸಿದ್ದವು.

ಇದೀಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆಯು ಇನ್ನಷ್ಟು ಕಡಿಮೆಯಾಗಿರುವ ಹಿನ್ನೆಲೆ ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ಪ್ರಮುಖ ಕಂಪನಿಗಳು, ತಯಾರಕರೊಂದಿಗೆ ಈ ವಿಚಾರವಾಗಿ ಸಭೆ ನಡೆಸಿದ್ದಾರೆ.  
ಜಾಗತಿಕ ಮಟ್ಟದಲ್ಲಿ ಅಡುಗೆ ಎಣ್ಣೆಗಳ ಬೆಲೆ ಒಂದು ವಾರದಲ್ಲಿ ಶೇಕಡ 10ರಷ್ಟು ಇಳಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ