ಬಾಯ್‌ಫ್ರೆಂಡ್ ಎದುರೇ ಯುವತಿಯ ಮೇಲೆ ಗ್ಯಾಂಗ್‌ರೇಪ್

ಶನಿವಾರ, 26 ಮೇ 2018 (14:31 IST)
ಗೋವಾದ ಕೋಲ್ವಾ ಬೀಚ್‌ನಲ್ಲಿ ಬಾಯ್‌ಫ್ರೆಂಡ್ ಎದುರೇ ಯುವತಿಯ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಒಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ಗೋವಾ ಪೊಲೀಸ್ ಮೂಲಗಳು ತಿಳಿಸಿವೆ. 
ಇಂದೋರ್ ಮೂಲದ ಮೂವರು ಪ್ರವಾಸಿಗರು 20 ವರ್ಷದ ಯುವತಿಯೊಂದಿಗೆ ಗ್ಯಾಂಗ್‌ರೇಪ್ ಎಸಗಿದ್ದಲ್ಲದೇ ದರೋಡೆ ಕೂಡಾ ಮಾಡಿರುವ ಆರೋಪದ ಮೇಲೆ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
 
20 ವರ್ಷದ ಯುವತಿ ತನ್ನ 22 ವರ್ಷದ ಬಾಯ್‌ಫ್ರೆಂಡ್‌ನೊಂದಿಗೆ ಕೋಲ್ವಾ ಬೀಚ್‌ನಲ್ಲಿ ಸುತ್ತಾಡಲು ಬಂದಿದ್ದಾಗ ಇಂತಹ ಹೇಯ ಘಟನೆ ವರದಿಯಾಗಿದೆ.
 
23 ವರ್ಷ ವಯಸ್ಸಿನ ಸಂಜೀವ್ ಧನಂಜಯ್ ಪಾಲ್, 19 ವರ್ಷದ ರಾಮ್ ಸಂತೋಷ್ ಭಾರಿಯಾ ಎನ್ನುವ ಆರೋಪಿಗಳನ್ನು ಬಂಧಿಸಲಾಗಿದ್ದು ಮತ್ತೊಬ್ಬ ಆರೋಪಿಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಗಾವಸ್ ತಿಳಿಸಿದ್ದಾರೆ.
 
ಅತ್ಯಾಚಾರಕ್ಕೊಳಗಾದ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಆರೋಪಿಗಳು ಗ್ಯಾಂಗ್‌ರೇಪ್ ಎಸಗಿದ್ದಲ್ಲದೇ ಗ್ಯಾಂಗ್‌ರೇಪ್ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸಿಕೊಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ವಿಡಿಯೋವನ್ನು ಇಂಟರ್‌ನೆಟ್‌ನಲ್ಲಿ ಬಹಿರಂಗಪಡಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ತಿಳಿಸಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ