ವಿರೋಧದ ನಡೆವೆಯೂ ಶಬರಿಮಲೆಯತ್ತ ತೆರಳುತ್ತಿರುವ ಇಬ್ಬರು ಮಹಿಳೆಯರು
ಋತುಮತಿಯಾಗುವ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದರೂ ಕೆಲವು ಸಂಘಟನೆಗಳು ಇದಕ್ಕೆ ಅಡ್ಡಿಪಡಿಸುತ್ತಿವೆ.
ಇದೆಲ್ಲದರ ಮಧ್ಯೆಯೂ ತೆಲಂಗಾಣದ ಓರ್ವ ಪತ್ರಕರ್ತೆ ಸೇರಿದಂತೆ ಇಬ್ಬರು ಮಹಿಳೆಯರು ದೇವಾಲಯದತ್ತ ತೆರಳುತ್ತಿದ್ದಾರೆ. ಇತ್ತ ಪ್ರತಿಭಟನಾಕಾರರು ಅವರನ್ನು ತಡೆಯಲು ಕಾದು ನಿಂತಿದ್ದಾರೆ. ನಿನ್ನೆಯಷ್ಟೇ ಓರ್ವ ಪತ್ರಕರ್ತೆ ಅರ್ಧಕ್ಕೇ ಯಾತ್ರೆ ಮೊಟಕುಗೊಳಿಸಿದ್ದರು. ಇಂದು ಈ ಇಬ್ಬರು ಮಹಿಳೆಯರು ಈಗಾಗಲೇ ಬೆಟ್ಟ ಏರಲು ಪ್ರಾರಂಭಿಸಿದ್ದು, ಒಂದು ವೇಳೆ ಇವರು ಮೇಲೆ ಬಂದರೆ ಮತ್ತೊಮ್ಮೆ ಹೈಡ್ರಾಮಾ ನಡೆಯುವ ಸಾಧ್ಯತೆಯಿದೆ. ಇತ್ತ ದೇವಾಲಯದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.