ಶಬರಿಮಲೆಯಲ್ಲಿ ಮತ್ತಿಬ್ಬರು ಮಹಿಳೆಯರಿಗೆ ತಡೆ: ನಮಗೆ ಸಂಪ್ರದಾಯವೇ ಗೊತ್ತಿರಲಿಲ್ಲ ಎಂದ ಮಹಿಳೆಯರು!
ಆಂಧ್ರಪ್ರದೇಶ ಮೂಲದ ಇಬ್ಬರು ಮಹಿಳೆಯರು ನಿನ್ನೆ ದೇವಾಲಯ ಪ್ರವೇಶಿಸಲು ಯತ್ನಿಸಿದ್ದು, ಪ್ರತಿಭಟನಾಕಾರರು ಅವರನ್ನು ತಡೆಹಿಡಿದಿದ್ದಾರೆ. ಬಳಿಕ ಪೊಲೀಸರು ಇವರನ್ನು ಸುರಕ್ಷಿತವಾಗಿ ಕಂಟ್ರೋಲ್ ರೂಂಗೆ ಕರೆದೊಯ್ದಿದ್ದಾರೆ.
ಸುಮಾರು 40 ವರ್ಷ ಆಸುಪಾಸಿನ ಇಬ್ಬರು ಮಹಿಳೆಯರು ದೇವಾಲಯದ ಮೆಟ್ಟಿಲುಗಳವರೆಗೆ ತಲುಪಿದ್ದರು. ಆದರೆ ಪ್ರತಿಭಟನಾಕಾರರು ಅವರನ್ನು ಅಲ್ಲಿಯೇ ತಡೆಹಿಡಿದಿದ್ದಾರೆ. ಈ ಸಂದರ್ಭದಲ್ಲಿ ನಮಗೆ ದೇವಾಲಯದ ಸಂಪ್ರದಾಯ ಗೊತ್ತಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ ಎನ್ನಲಾಗಿದೆ.