ತಿರುವನಂತಪುರಂ: 10-50 ವರ್ಷದ ಋತುಮತಿಯಾಗುವ ಮಹಿಳೆಯರು ಶಬರಿಮಲೆ ಪ್ರವೇಶಿಸಲು ಸುಪ್ರೀಂಕೋರ್ಟ್ ಆದೇಶಿಸಿದ ಹಿನ್ನಲೆಯಲ್ಲೂ ಇಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇದರ ನಡುವೆ ಗೊಂದಲ ಮೂಡಿಸುವ ಪ್ರಸಂಗವೊಂದು ನಡೆದಿದೆ.
50 ವರ್ಷದೊಳಗಿನ ತಮಿಳುನಾಡು ಮೂಲದ ಮಹಿಳೆಯೊಬ್ಬಳು ವಯಸ್ಸಿನ ಬಗ್ಗೆ ಸುಳ್ಳು ಹೇಳಿ ದೇವಾಲಯ ಪ್ರವೇಶಿಸಿದ್ದಾರೆಂಬ ವದಂತಿ ಹರಡಿ ಕೆಲವು ಕಾಲ ಶಬರಿಮಲೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ತಿರುಚಿಯ ಲತಾ ಎಂಬವರು ದೇವಾಲಯ ಪ್ರವೇಶಿಸಲು ತನ್ನ ಕುಟುಂಬ ಸಮೇತ ಬಂದಿದ್ದಾಗ ಪ್ರತಿಭಟನಾಕಾರರು ಆಕೆಯನ್ನು ತಡೆದರು. ಬಳಿಕ ಆಕೆ ಐಡಿ ಕಾರ್ಡ್ ತೋರಿಸಿ ತನ್ನ ವಯಸ್ಸು 52 ಎಂದು ದೃಢೀಕರಿಸಿದ ಮೇಲೆ ಆಕೆಯನ್ನು ದೇವಾಲಯ ಪ್ರವೇಶಿಸಲು ಅನುವು ಮಾಡಿಕೊಡಲಾಯಿತು. ಇದರಿಂದಾಗಿ ಕೆಲವು ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿ ಸೆಕ್ಷನ್ 144 ಜಾರಿಗೊಳಿಸಲಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.