ಬೇಗ ಮಗು ಮಾಡ್ಕೊಳ್ಳಿ ಎಂದು ಸಲಹೆ ನೀಡಿದ ಉದಯನಿಧಿ: ಅವರಿಗೆಷ್ಟು ಮಕ್ಕಳು ನೋಡಿ
ಇತ್ತೀಚೆಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ನೂತನ ದಂಪತಿಗಳು ಬೇಗ ಮಗು ಮಾಡಿಕೊಳ್ಳಬೇಕು. ನಮ್ಮ ಜನಸಂಖ್ಯೆ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದರು.
ಇದೀಗ ಅವರ ಮಾತನ್ನೇ ಅವರ ಪುತ್ರ, ಡಿಸಿಎಂ ಎಂಕೆ ಸ್ಟಾಲಿನ್ ಕೂಡಾ ಅನುಕರಿಸಿದ್ದಾರೆ. ನಮ್ಮ ಜನಸಂಖ್ಯೆ ಕಡಿಮೆಯಾಗುತ್ತಿದೆ. ಕ್ಷೇತ್ರ ವಿಂಗಡಣೆ ವೇಳೆ ನಾವು 8 ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ ನಮಗೆ ಅನ್ಯಾಯವಾಗುತ್ತದೆ. ಹೀಗಾಗಿ ದಂಪತಿಗಳು ಬೇಗ ಮಗು ಮಾಡಿಕೊಳ್ಳುವ ಬಗ್ಗೆ ಚಿಂತನೆ ಮಾಡಬೇಕು ಎಂದಿದ್ದಾರೆ.
ಇಂತಿಪ್ಪ ಉದಯನಿಧಿ ಸ್ಟಾಲಿನ್ ಗೆ ಎಷ್ಟು ಮಕ್ಕಳು ಗೊತ್ತಾ? ಉದಯನಿಧಿ ಸ್ಟಾಲಿನ್ ಮತ್ತು ಕಿರುತಿಗ ಉದಯನಿಧಿ ದಂಪತಿಗೆ ಇಬ್ಬರು ಮಕ್ಕಳು. ಹಿರಿಯ ಪುತ್ರ ಇನ್ಬನಿಧಿ ಮತ್ತು ಕಿರುಯ ಪುತ್ರಿ ತನ್ಮಯ ಉದಯನಿಧಿ. ಇಬ್ಬರೂ ಇನ್ನೂ ಓದುತ್ತಿದ್ದಾರೆ. ಪುತ್ರ ಇನ್ಬನಿಧಿಗೆ ಇನ್ನೂ 20 ವರ್ಷ. ಫುಟ್ಬಾಲ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.