ಚೆನ್ನೈ: ತಮಿಳುನಾಡು ಸಚಿವ, ಡಿಎಂಕೆ ನಾಯಕ ಉದಯನಿಧಿ ಮಾರನ್ ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಮಸೀದಿ ಕೆಡವಬಾರದಿತ್ತು ಎಂದಿದ್ದಾರೆ. ಅವರ ಈ ಹೇಳಿಕೆ ಮತ್ತೆ ವಿವಾದಕ್ಕೆ ಗುರಿಯಾಗುವ ಸಾಧ‍್ಯತೆಯಿದೆ.
ಮಂದಿರವೋ, ಧಾರ್ಮಿಕ ಕೇಂದ್ರವೋ ನಿರ್ಮಾಣವಾಗುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಮಸೀದಿ ಕೆಡವಿ ಮಂದಿರ ನಿರ್ಮಾಣ ಮಾಡಬೇಕಾಗಿರಲಿಲ್ಲ. ಇದಕ್ಕೆ ನಮ್ಮ ಸಹಮತವಿಲ್ಲ ಎಂದಿದ್ದಾರೆ. ಜೊತೆಗೆ ರಾಜಕೀಯದಲ್ಲಿ ಧರ್ಮ ಬೆರಕೆಯಾಗಬಾರದು ಎಂದೂ ಹೇಳಿದ್ದಾರೆ.
ಈ ಮೊದಲು ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಇದು ನಾಶವಾಗಬೇಕು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು.