ಸನಾತನ ಧರ್ಮದಂತೆಯೇ ಗಣೇಶ ಹಬ್ಬ!

ಶನಿವಾರ, 16 ಸೆಪ್ಟಂಬರ್ 2023 (18:00 IST)
ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ,ಉದಯನಿಧಿ ಸ್ಟಾಲಿನ್ ವಿರುದ್ಧ ಹಿಂದೂ ಸಂಘಟನೆಗಳು ಸಮರ ಸಾರಿವೆ. ಗಣೇಶ ಹಬ್ಬವನ್ನ ಸನಾತನ ಧರ್ಮದ ರೀತಿಯಲ್ಲಿಯೇ ಆಚರಿಸಲು ಹಿಂದೂ ಸಂಘಟನೆಗಳು ಮುಂದಾಗಿವೆ. ಯಾವುದೇ ಆಡಂಬರಗಳಿಲ್ಲದೆ, ಸಂಪೂರ್ಣವಾಗಿ ಹಿಂದೂ ಸಂಸ್ಕೃತಿಯ ರೀತಿಯೇ ಗಣೇಶ ಹಬ್ಬ ಆಚರಿಸಲು ನಿರ್ಧರಿಸಿವೆ. ಈ ಹಿನ್ನೆಲೆ ರಾಜ್ಯದ ಎಲ್ಲಾ ಗಣೇಶ ಮಂಡಳಿಗಳಿಗೂ ಸನಾತನ ರೀತಿಯಲ್ಲಿ‌ಯೇ ಹಬ್ಬ ಆಚರಿಸುವಂತೆ ಮನವಿ ಮಾಡಲಾಗಿದೆ. ಗಣೇಶ ಮಂಡಳಿಗಳಿಗೆ ವೀರ ಸಾವರ್ಕರ್, ಬಾಲ ಗಂಗಾಧರ ತಿಲಕ್ ಹೆಸರಿಡುವಂತೆ ಕೂಡ ಮನವಿ ಮಾಡಲಾಗಿದೆ. ಹಿಂದೂಗಳೆಲ್ಲರೂ ಒಗ್ಗಟ್ಟಾಗಿ ಶಕ್ತಿ ಪ್ರದರ್ಶನ ಮಾಡಿ ಸನಾತನ ಧರ್ಮದ ಹಿರಿಮೆ ತೋರಿಸಲು ಹಿಂದೂ ಸಂಘಟನೆಗಳು ಸಜ್ಜಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ