ಮುಂಬೈ : 40 ತಲೆಯ ರಾವಣನು ಶ್ರೀರಾಮನ ಧನಸ್ಸನ್ನು ಕಿತ್ತುಕೊಂಡಿದ್ದಾನೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿರುಗೇಟು ನೀಡಿದರು.
ಮುಂಬರುವ ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಯಲ್ಲಿ ಶಿವಸೇನೆಯ ಬಿಲ್ಲು ಬಾಣದ ಚಿಹ್ನೆಯನ್ನು ಪಕ್ಷದ ಎರಡೂ ಬಣಗಳು ಬಳಸದಂತೆ ಚುನಾವಣಾ ಆಯೋಗ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು,
ಮರಾಠಿ ಜನರ ಕಲ್ಯಾಣಕ್ಕಾಗಿ ಮಹಾರಾಷ್ಟ್ರದ ಹಿತಾಸಕ್ತಿಯಿಂದ ಶಿವಸೇನೆಯನ್ನು ರಚಿಸಲಾಗಿದೆ. ಆದರೆ ನಾನು ಚುನಾವಣಾ ಆಯೋಗದಿಂದ ಈ ನಿರ್ಧಾರವನ್ನು ನಿರೀಕ್ಷಿಸಿರಲಿಲ್ಲ. ನಾನು ನ್ಯಾಯಾಂಗವನ್ನು ನಂಬುತ್ತೇನೆ. ನಮಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಇದೆ. ರಾವಣನು ಶ್ರೀರಾಮನ ಧನಸ್ಸನ್ನು ಕಿತ್ತುಕೊಂಡಿದ್ದಾನೆ ಎಂದರು.
ನಾನು ದುಃಖಿತನಾಗಿದ್ದರೂ ಕೋಪಗೊಂಡಿದ್ದೇನೆ. ಏಕೆಂದರೆ ನೀವು ನಿನ್ನ ತಾಯಿಯ ಎದೆಗೆ ಚಾಕುವಿನಿಂದ ಇರಿದಿದ್ದೀರಿ. ನಿಮಗೆ ಧೈರ್ಯವಿದ್ದರೆ ಬಾಳಾಸಾಹೇಬರ ಹೆಸರನ್ನು ಬಳಸಬೇಡಿ ಎಂದು ಶಿಂಧೆಗೆ ಸವಾಲು ಹಾಕಿದರು.