ಸಿಎಂ ಗದ್ದುಗೆ ಏರಿದ ಏಕನಾಥ್ ಶಿಂಧೆ

ಶುಕ್ರವಾರ, 1 ಜುಲೈ 2022 (09:02 IST)
ಮುಂಬೈ : ಮಹಾರಾಷ್ಟ್ರ ರಾಜಕೀಯಕ್ಕೆ ಬಿಜೆಪಿ ಬಿಗ್ ಟ್ವಿಸ್ಟ್ ನೀಡಿದೆ. ಪಕ್ಷದ ಭವಿಷ್ಯದ ದೃಷ್ಟಿಯಿಂದ ಯಾರೂ ಊಹೆ ಮಾಡದ ರೀತಿಯಲ್ಲಿ ದಾಳ ಉರುಳಿಸಿದೆ.
 
ಶಿವಸೇನೆ ರೆಬಲ್ ನಾಯಕ, ಒಂದು ಕಾಲದಲ್ಲಿ ಆಟೋ ಡ್ರೈವರ್ ಆಗಿದ್ದ ಶಿವಸೈನಿಕ ಏಕನಾಥ್ ಶಿಂಧೆಯನ್ನು ಸಿಎಂ ಸ್ಥಾನದಲ್ಲಿ ಪ್ರತಿಷ್ಠಾಪಿಸಿದೆ.

ಶಿವಸೇನೆ ಸ್ಥಾಪಕ ಬಾಳಾ ಠಾಕ್ರೆ ಹೆಸರಲ್ಲಿ ಶಿಂಧೆ ಪ್ರಮಾಣ ಸ್ವೀಕರಿಸಿದ್ದಾರೆ. ಈ ಮೂಲಕ ನಿರ್ಗಮಿತ ಸಿಎಂ ಉದ್ಧವ್ಠಾಕ್ರೆಗೆ ಬಿಜೆಪಿ ಮತ್ತು ಶಿಂಧೆ ಬಣ ಬಿಗ್ ಶಾಕ್ ನೀಡಿದೆ. ಎಲ್ಲರೂ, ಸಿಎಂ ಆಗ್ತಾರೆ ಎಂದು ಭಾವಿಸಿದ್ದ ದೇವೇಂದ್ರ ಫಡ್ನವೀಸ್ ಡಿಸಿಎಂ ಆಗಿದ್ದಾರೆ.

ಮೊದಲು ಸರ್ಕಾರದಿಂದ ಹೊರಗೆ ಉಳಿಯಲು ಬಯಸಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಒತ್ತಾಸೆ ಮೇರೆಗೆ ಫಡ್ನವೀಸ್ ಸರ್ಕಾರದ ಭಾಗವಾಗಿದ್ದಾರೆ. ಮೂರ್ನಾಲ್ಕು ದಿನದಲ್ಲಿ ನೂತನ ಸಚಿವರ ಪ್ರಮಾಣವಚನ ನಡೆಯುವ ಸಂಭವ ಇದೆ. ಶಿಂಧೆ ಸೇನೆಗೆ ಎಷ್ಟು ಸ್ಥಾನ, ಬಿಜೆಪಿಗೆ ಎಷ್ಟು ಸ್ಥಾನ, ಯಾರಿಗೆ ಯಾವ ಖಾತೆ ನೀಡಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

 ಸಂಜೆ 4:30ಕ್ಕೆ ಏಕನಾಥ್ಶಿಂಧೆ ಮತ್ತು ದೇವೇಂದ್ರ ಫಡ್ನವೀಸ್ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕುದಾರಿಕೆ ಮಂಡಿಸಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ