ಉಗ್ರರಿಂದ ಬಿಜೆಪಿ ನಾಯಕನ ಪುತ್ರನ ಅಪಹರಣ

ಮಂಗಳವಾರ, 23 ಆಗಸ್ಟ್ 2016 (10:22 IST)
ಅರುಣಾಚಲಪ್ರದೇಶದ ತಿನ್ ಸುಕಿಯಾ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ರತ್ನೇಶ್ವರ್ ಮೊರಾನ್ ಅವರ ಪುತ್ರ, ಕುಲ್ದೀಪ್ ಮೊರಾನ್‌(27)ನನ್ನು ಶಂಕಿತ ಉಲ್ಫಾ ಉಗ್ರರು ಅಪಹರಿಸಿದ್ದಾರೆ. ಕುಲ್ದೀಪ್ ಅಂಕಲ್ ಕೂಡ ಶಾಸಕರಾಗಿದ್ದಾರೆ.

ಆಗಸ್ಟ್ 1 ರಂದು ನಾಪೊಂಗ್ ಪ್ರದೇಶದಿಂದ ಕುಲ್ದೀಪ್‌ನನ್ನು ಅಪಹರಿಸಲಾಗಿತ್ತು. ಆತನ ಬಿಡುಗಡೆಗೆ ಉಗ್ರರು 1 ಕೋಟಿ ರೂಪಾಯಿ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
 
ಪ್ರಥಮ ಬಾರಿ ಈ ಉಲ್ಫಾ ಉಗ್ರರು ಐಸಿಸ್ ಶೈಲಿಯ ಆಘಾತಕಾರಿ ವಿಡಿಯೋವೊಂದನ್ನು ಮಾಧ್ಯಮ ಕಚೇರಿಗೆ ಕಳುಹಿಸಿದ್ದಾರೆ. ಅಪಹೃತ ಯುವಕ ಬಿಡುಗಡೆಗಾಗಿ ಗೋಗರೆಯುತ್ತಿರುವ, ಆತನ ಸುತ್ತಮುತ್ತ ಗನ್ ಹಿಡಿದುಕೊಂಡು ಐವರು ಮುಸುಕುಧಾರಿ ಉಗ್ರರು ನಿಂತಿರುವುದು ಆ ವಿಡಿಯೋದಲ್ಲಿದೆ.
 
ಹಸಿರು ಟಿ- ಶರ್ಟ್ ಧರಿಸಿರುವ ಕುಲ್ದೀಪ್ ತನ್ನ ಪೋಷಕರು, ಅಂಕಲ್ ಮತ್ತು ಸಿಎಂ ಸರ್ಬಾನಂದ ಸೋನೋವಾಲ್ ಜತೆಯಲ್ಲಿ ನನ್ನನ್ನು ಬಿಡುಗಡೆಗೊಳಿಸಿ ಎಂದು ಅಳುತ್ತಿದ್ದಾನೆ. ನನ್ನ ಆರೋಗ್ಯ ಕೆಟ್ಟಿದೆ. ಹಣ ಕೊಟ್ಟು ನನ್ನನ್ನು ಬಿಡುಗಡೆ ಮಾಡಿ. ಅವರು ನನ್ನನ್ನು ಕೊಲ್ಲುತ್ತಾರೆ ಎಂದಾತ ಗೋಗರೆಯುತ್ತಿದ್ದಾನೆ.
 
ಮಾನವೀಯ ನೆಲೆಯಲ್ಲಿ ಆ ಹುಡುಗನನ್ನು ಬಿಡುಗಡೆಗೊಳಿಸಿ. ಹಿಂಸೆಯಿಂದ ಏನನ್ನು ಸಾಧಿಸಲಾಗುವುದಿಲ್ಲ ಎಂದು ನಮ್ಮ ಸರ್ಕಾರ ನಂಬಿದೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಉಗ್ರರನ್ನುದ್ದೇಶಿಸಿ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ