ಗಾಂಧಿ, ಪಟೇಲರ ನಡುವೆ ಅವಿನಾಭಾವ ಸಂಬಂಧ: ಪ್ರಧಾನಿ ಮೋದಿ

ಸೋಮವಾರ, 6 ನವೆಂಬರ್ 2023 (13:49 IST)
ಗಾಂಧಿ ಮತ್ತು ಪಟೇಲರ ನಡುವೆ ಅವಿನಾಭಾವ ಸಂಬಂಧವಿತ್ತು. ವಿವೇಕಾನಂದರಿಲ್ಲದೇ ರಾಮಕೃಷ್ಣ ಪರಮಹಂಸರು ಅಪೂರ್ಣರೆನಿಸುತ್ತಾರೆ. ಅಂತೆಯೇ  ಪಟೇಲರಿಲ್ಲದೆ ಗಾಂಧಿ ಕೂಡ ಅಪೂರ್ಣ, ಅವರ ನಡುವಿನ ಸಂಬಂಧ ಅಚಲವಾಗಿತ್ತು . ಇಬ್ಬರು ನಾಯಕರ ಜೋಡಿ ಅದ್ಬುತವಾಗಿತ್ತು. ಈ ಅನನ್ಯ ಸಹಭಾಗಿತ್ವ ಸ್ವಾತಂತ್ರ್ಯ ಹೋರಾಟವನ್ನು ಬಲಪಡಿಸಿತು " ಎಂದು ಏಕತಾ ಓಟಕ್ಕೆ ಚಾಲನೆ ನೀಡಿ ಪ್ರಧಾನಿ ಮೋದಿ ಹೇಳಿದ್ದಾರೆ.
 
"ಸರ್ದಾರ್ ವಲ್ಲಭಬಾಯಿ ಪಟೇಲರಿಲ್ಲದೆ ಗಾಂಧಿ ಕೂಡ ಅಪೂರ್ಣ, ರಾಷ್ಟ್ರಪಿತ ಆರಂಭಿಸಿದ ಸ್ವಾತಂತ್ರ್ಯ ಹೋರಾಟದಲ್ಲಿ ಪಟೇಲ್ ಅವಿಭಾಜ್ಯ ಪಾತ್ರವನ್ನು ವಹಿಸಿದ್ದರು  ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
 
ಸ್ವಾತಂತ್ರ್ಯ ಹೋರಾಟದಲ್ಲಿ ರೈತರ ಏಕೀಕರಣದ ಮೂಲಕ ಸರ್ದಾರ್ ಪಟೇಲ್ ಮಹಾತ್ಮ ಗಾಂಧಿಯವರನ್ನು ಸೇರಿಕೊಂಡರು. ಅವರು  ದಂಡಿಯಲ್ಲಿ ಯಾತ್ರೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು " ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.
 
ರಾಷ್ಟ್ರ ರಾಜಧಾನಿಯಲ್ಲಿ ಪಟೇಲ್ ಜನ್ಮದಿನದ ಪ್ರತೀಕವಾಗಿ ಆಯೋಜಿಸಲಾಗಿದ್ದ ಏಕತಾ ಓಟದಲ್ಲಿ ಪ್ರಧಾನಿ ಮೋದಿ, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸಾವಿರಾರು ಸಾರ್ವಜನಿಕರು ಓಟದಲ್ಲಿ ಪಾಲ್ಗೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ