Union Budget 2024: ಸರ್ಕಾರ ರಚಿಸಲು ಸಹಾಯ ಮಾಡಿದ್ದಕ್ಕೆ ಆಂಧ್ರಪ್ರದೇಶ, ಬಿಹಾರಕ್ಕೆ ಬಂಪರ್ ಕೊಡುಗೆ, ವಿಪಕ್ಷಗಳಿಂದ ಗದ್ದಲ

Krishnaveni K

ಮಂಗಳವಾರ, 23 ಜುಲೈ 2024 (12:34 IST)
ನವದೆಹಲಿ: ಕೇಂದ್ರ ಬಜೆಟ್ 2024 ರನ್ನು ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಭರ್ಜರಿ ಕೊಡುಗೆಗಳನ್ನು ನೀಡಿದೆ.

ಬಿಹಾರ ಮತ್ತು ಆಂಧ್ರಪ್ರದೇಶದ ಜೆಡಿಯು ಮತ್ತು ಟಿಡಿಪಿ ಪಕ್ಷಗಳು ಈ ಬಾರಿ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ರಚಿಸಲು ಪ್ರಮುಖ ಪಾತ್ರ ವಹಿಸಿದ್ದವು. ಈ ವೇಳೆ ಈ ಎರಡೂ ಪಕ್ಷಗಳೂ ಮುಂದೆ ತಮ್ಮ ರಾಜ್ಯಕ್ಕೆ ವಿಶೇಷ ಅನುದಾನ ನೀಡಬೇಕೆಂದು ಬೇಡಿಕೆಯಿಟ್ಟಿದ್ದವು. ಅದರಂತೆ ಮೋದಿ ಸರ್ಕಾರ ಈ ಎರಡೂ ರಾಜ್ಯಗಳಿಗೆ ಬಂಪರ್ ಅನುದಾನ ಘೋಷಿಸಿದೆ.

ಬಿಹಾರದಲ್ಲಿ ರೈಲ್ವೇ, ವಿಮಾನ ನಿಲ್ದಾಣ, ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಾವಿರಾರು ಕೋಟಿ ಅನುದಾನ, ಇತ್ತ ಆಂಧ್ರಪ್ರದೇಶಕ್ಕೆ ರಾಜಧಾನಿ ನಿರ್ಮಾಣಕ್ಕೆ ನೆರವು ಸೇರಿದಂತೆ ಬಂಪರ್ ಘೋಷಣೆಗಳನ್ನೇ ನೀಡಿದೆ. ಇತ್ತ ನಿರ್ಮಲಾ ಹೀಗೊಂದು ಘೋಷಣೆ ಮಾಡುತ್ತಿದ್ದಂತೇ ವಿಪಕ್ಷಗಳು ಜೋರಾಗಿ ಕೂಗಿ ಗದ್ದಲವೆಬ್ಬಿಸಿವೆ.

ಸರ್ಕಾರ ರಚಿಸಲು ಸಹಾಯ ಮಾಡಿದ್ದಕ್ಕೆ ಋಣ ಸಂದಾಯ ಮಾಡಲಾಗಿದೆ ಎಂದು ಮೂದಲಿಸಿವೆ. ನೆರೆ ಪರಿಹಾರಕ್ಕೆ ನೆರವು ವಿಚಾರದಲ್ಲೂ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುತ್ತಿದ್ದಂತೇ ವಿಪಕ್ಷಗಳು ಜೋರಾಗಿ ಗದ್ದಲವೆಬ್ಬಿಸಿವೆ. ಈ ಬಜೆಟ್ ನಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಹೆಚ್ಚಿನ ಅನುದಾನ ಘೋಷಣೆ ಮಾಡದೇ ಇರುವುದೂ ವಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ