ದೇಶಕ್ಕೇ ಬಜೆಟ್ ಮಂಡಿಸುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವೇತನ, ಆಸ್ತಿ ಮೌಲ್ಯ ಇಷ್ಟು

Krishnaveni K

ಮಂಗಳವಾರ, 23 ಜುಲೈ 2024 (09:15 IST)
ನವದೆಹಲಿ: ಸತತ ಏಳನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿ ದಾಖಲೆ ಮಾಡುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವೈಯಕ್ತಿಕವಾಗಿ ಎಷ್ಟು ಆಸ್ತಿ ಹೊಂದಿದ್ದಾರೆ, ಅವರ ಸ್ಯಾಲರಿ ಎಷ್ಟು ಎಂಬ ವಿವರ ಇಲ್ಲಿದೆ.

64 ವರ್ಷದ ನಿರ್ಮಲಾ ಸೀತಾರಾಮನ್ ಅರ್ಥಶಾಸ್ತ್ರದಲ್ಲಿ ಎಂ.ಎ. ಮತ್ತು ಎಂಫಿಲ್ ಪದವೀಧರೆ.  2019 ರಿಂದ ಅವರು ವಿತ್ತ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2023 ರ ಫೋರ್ಬ್ಸ್ ಪಟ್ಟಿಯ ಪ್ರಕಾರ ವಿಶ್ವದ 100 ಅತ್ಯಂತ ಪ್ರಭಾವಶಾಲೀ ಮಹಿಳೆಯರಲ್ಲಿ ನಿರ್ಮಲಾ ಕೂಡಾ ಒಬ್ಬರು. ಅವರು ಈ ಪಟ್ಟಿಯಲ್ಲಿ ಜಾಗತಿಕವಾಗಿ 32 ನೇ ಸ್ಥಾನ ಪಡೆದಿದ್ದರು. ಮಾತಿಗೆ ನಿಂತರೆ ಎದುರಾಳಿಗಳನ್ನು ಪಾಯಿಂಟ್ ಹಾಕಿ ಸುಮ್ಮನಾಗಿಸುವ ಛಾತಿ ಅವರದ್ದು.

ಆದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದೇ ರಾಜ್ಯ ಸಭೆ ಮೂಲಕವೇ ಸಂಸದೆಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಖರ್ಚು ಮಾಡುವಷ್ಟು ಹಣ ನನ್ನಲ್ಲಿಲ್ಲ ಎಂದು ಇತ್ತೀಚೆಗಿನ ಲೋಕಸಭಾ ಚುನಾವಣೆ ವೇಳೆ ಹೇಳಿದ್ದರು. ಹಾಗಿದ್ದರೆ ದೇಶಕ್ಕೆಲ್ಲಾ ಹಣಕಾಸು ಹಂಚುವ ನಿರ್ಮಲಾ ಬಳಿ ಎಷ್ಟು ಆಸ್ತಿಯಿದೆ ನೋಡಿ.

ಸಂಸದರ ಆಸ್ತಿ ಮೌಲ್ಯ ಘೋಷಿಸುವ ಸರ್ಕಾರೀ ವೆಬ್ ಸೈಟ್ ಪ್ರಕಾರ ನಿರ್ಮಲಾ 2 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಜೊತೆಗೆ 30 ಲಕ್ಷ ರೂ. ಸಾಲವಿದೆ. ಒಂದು ಹೋಂ ಲೋನ್ ಮಾಡಿಕೊಂಡಿದ್ದಾರೆ. ಅವರ ಬಳಿ ಸ್ವಂತ ಕಾರು ಇಲ್ಲ. ಬದಲಾಗಿ ಒಂದು ಚೇತಕ್ ಬಜಾಜ್ ಸ್ಕೂಟಿ ಇದೆ. ಇದರ ಬೆಲೆ ಕೇವಲ 28, 200 ರೂ. ನಿರ್ಮಲಾ ಒಬ್ಬ ಕೇಂದ್ರ ಸಚಿವೆಯಾಗಿ ಎಲ್ಲಾ ಭತ್ಯೆ ಸೇರಿದಂತೆ ಮಾಸಿಕ 4 ಲಕ್ಷ ರೂ. ವೇತನ ಪಡೆಯುತ್ತಾರೆ ಎಂಬ ಮಾಹಿತಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ