ಲಾಕ್ ಡೌನ್ ಬಗ್ಗೆ ಚರ್ಚಿಸಲು ಇಂದು ಸಂಜೆ 5.30ಕ್ಕೆ ಕೇಂದ್ರ ಸಚಿವ ಸಂಪುಟ ಸಭೆ

ಬುಧವಾರ, 15 ಏಪ್ರಿಲ್ 2020 (11:21 IST)

ನವದೆಹಲಿ : ಲಾಕ್ ಡೌನ್ ಮೇ 3ರವರೆಗೆ ಹಿನ್ನಲೆಯಲ್ಲಿ  ಇಂದು ಸಂಜೆ 5.30ಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಕರೆಯಲಾಗಿದೆ.

 

ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪುಟ ಸಭೆ ನಡೆಸಲಿದ್ದು, ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಘೋಷಿಸಿದ್ದಂತೆ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

 

ಅದರ ಜೊತೆಗೆ 2ನೇ ಹಂತದ ಲಾಕ್ ಡೌನ್ ಜಾರಿ ಬಗ್ಗೆ ಹಾಗೂ  ಲಾಕ್ ಡೌನ್ ಯಶಸ್ವಿಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎನ್ನಲಾಗಿದೆ. ಹಾಗೇ ಸೋಂಕು ಹರಡುವಿಕೆ ತೀವ್ರತೆ ಬಗ್ಗೆಯೂ ಚರ್ಚಿಸಲಾಗುವುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ