ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಪ್ರಧಾನಿ, ಏಕತೆ ಮತ್ತು ಪ್ರೀತಿಯ ಮಂತ್ರಗಳಿಂದ ಕಾಶ್ಮೀರ ಸಮಸ್ಯೆಗಳ ಪರಿಹಾರ ಸಾಧ್ಯ ಎಂದು ಪ್ರಧಾನಮಂತ್ರಿ ಭಾನುವಾರ ತಿಳಿಸಿದರು. ಕಣಿವೆಯಲ್ಲಿ ಪ್ರಸಕ್ತ ಪ್ರಕ್ಷುಬ್ಧ ಸ್ಥಿತಿಯು ರಾಷ್ಟ್ರಕ್ಕುಂಟಾಗುವ ನಷ್ಟ ಎಂದು ಪ್ರತಿಪಾದಿಸಿದರು.
ಈ ದೇಶವು ಅತೀ ದೊಡ್ಡದಾಗಿದ್ದು ವೈವಿಧ್ಯತೆಯಿಂದ ಕೂಡಿದೆ. ಇದರ ಏಕತೆಯನ್ನು ಬಲಪಡಿಸುವ ಹೊಣೆಗಾರಿಕೆ ಪೌರರಾಗಿ ನಮ್ಮೆಲ್ಲರಿಗೆ, ಸಮಾಜಕ್ಕೆ ಮತ್ತು ಸರ್ಕಾರಕ್ಕಿದೆ. ಆಗ ಮಾತ್ರ ರಾಷ್ಟ್ರ ಭವ್ಯ ಭವಿಷ್ಯ ಸಾಧಿಸಬಹುದು. ಈ ದೇಶದ 125 ಕೋಟಿ ಜನರ ಶಕ್ತಿ ಮೇಲೆ ನನಗೆ ವಿಶ್ವಾಸವಿದೆ ಎಂದು ಮೋದಿ ಪ್ರತಿಪಾದಿಸಿದರು.