ಹೊಸ ಮರ್ಸಿಡಿಸ್ ಕಾರು ಖರೀದಿ ಪ್ರಸ್ತಾವನೆ ತಿರಸ್ಕರಿಸಿದ ಸಿಎಂ ಯೋಗಿ ಆದತ್ಯನಾಥ್
ಬುಧವಾರ, 5 ಜುಲೈ 2017 (18:19 IST)
ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳು ತಮಗಾಗಿ ಹೊಸ ಕಾರು ಖರೀದಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿರಸ್ಕರಿಸಿದ್ದಾರೆ.
ಸಿಎಂ ಸುರ್ಪದಿಯಲ್ಲಿ ಕೇವಲ ಒಂದು ಮರ್ಸಿಡಿಸ್ ಕಾರು ಇರುವುದರಿಂದ ಮತ್ತೊಂದು ಕಾರು ಖರೀದಿಸಲು ಸಿಎಂ ಕಚೇರಿ ತನ್ನ ಪ್ರಸ್ತಾಪವನ್ನು ಮುಂದಿಟ್ಟಿತ್ತು ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಧಿಕಾರದಲ್ಲಿದ್ದಾಗ ಎರಡು ಸುವಿ ಕಾರುಗಳನ್ನು ಹೊಂದಿದ್ದರಿಂದ, ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕೂಡಾ ಎರಡು ಕಾರುಗಳಿದ್ದಲ್ಲಿ ಸೂಕ್ತ ಎನ್ನುವ ಅಭಿಪ್ರಾಯಕ್ಕೆ ಇಲಾಖೆ ಬಂದಿತ್ತು.
ಮಾಜಿ ಸಿಎಂ ಅಖಿಲೇಶ್ ಅಧಿಕಾರದಿಂದ ಕೆಳಗಿಳಿದ ನಂತರ ಎರಡು ಸುವಿ ಕಾರುಗಳಲ್ಲಿ ಒಂದು ಕಾರನ್ನು ಉತ್ತರಪ್ರದೇಶದ ಪ್ರಬಲ ರಾಜಕಾರಣಿಯಾದ ಮಾಜಿ ಕೇಂದ್ರ ಸಚಿವರೊಬ್ಬರಿಗೆ ನೀಡಲಾಗಿತ್ತು. ಅದನ್ನು ತಿರುಗಿಸುವಂತೆ ಅಧಿಕಾರಿಗಳ ಕೇಳದಿರುವ ಹಿನ್ನೆಲೆಯಲ್ಲಿ ಹೊಸ ಕಾರು ಖರೀದಿಸುವ ಪ್ರಸ್ತಾವನೆಯನ್ನು ಸಿಎಂ ಕಚೇರಿಗೆ ಸಲ್ಲಿಸಲಾಗಿತ್ತು.
ಮಾಜಿ ಸಿಎಂ ಅಖಿಲೇಶ್ ಯಾದವ್ ಉಪಯೋಗಿಸುತ್ತಿದ್ದ ಸುವಿ ಕಾರು ಉತ್ತಮವಾದ ಸ್ಥಿತಿಯಲ್ಲಿರುವುದರಿಂದ ಸಿಎಂ ಯೋಗಿ ಆದಿತ್ಯನಾಥ್, ಹೊಸ ಕಾರು ಖರೀದಿಸುವ ಪ್ರಸ್ತಾವನೆ ತಿರಸ್ಕರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.