ಸಮುದ್ರ ವಿಮಾನ ಸೇವೆ ಆರಂಭಿಸಲು ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಿದ ಯುಪಿ ಸರ್ಕಾರ

ಗುರುವಾರ, 9 ಸೆಪ್ಟಂಬರ್ 2021 (12:49 IST)
ಉತ್ತರ ಪ್ರದೇಶ :  ಸರ್ಕಾರವು ವಾರಣಾಸಿ ಹಾಗೂ ಗೋರಕ್ಪುರದ ನಡುವೆ ರಾಜ್ಯದ ಮೊಟ್ಟ ಮೊದಲ ಸಮುದ್ರ ವಿಮಾನ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಈ ಬಗ್ಗೆ ಅನುಮತಿ ಕೋರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದೆ.

ಉತ್ತರ ಪ್ರದೇಶದ ನಾಗರಿಕ ವಿಮಾನಯಾನ ಸಚಿವ ನಂದ ಗೋಪಾಲ್ ಗುಪ್ತಾ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಈ ಭೇಟಿಯ ವೇಳೆ ಗೋರಕಪುರದಿಂದ ವಾರಣಾಸಿಗೆ ಸೀ ಪ್ಲೇನ್ ಸೇವೆಯನ್ನು ಆರಂಭಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರ ಜೊತೆಯಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದ ಇನ್ನೂ ಹಲವು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ನಂದಗೋಪಾಲ ಗುಪ್ತಾ ನಂದಿ ಜ್ಯೋತಿರಾದಿತ್ಯ ಸಿಂಧಿಯಾ ಬಳಿ ಸೀ ಪ್ಲೇನ್ ಸೇವೆಯ ಸಂಬಂಧ ತುರ್ತು ಕ್ರಮ ಜಾರಿಗೆ ಬರುವಂತೆ ಹಾಗೂ ಈ ಯೋಜನೆಯ ಸಂಬಂಧ ಅಧ್ಯಯನ ನಡೆಸುವಂತೆ ಕೇಳಿದ್ದಾರೆ ಎನ್ನಲಾಗಿದೆ.
ಸೀ ಪ್ಲೇನ್ ಸೇವೆಯು ಭೂಮಿ ಹಾಗೂ ಜಲಮಾರ್ಗಗಳರೆಡರಲ್ಲಿಯೂ ಚಲಿಸುವ ಸಾಮರ್ಥ್ಯ ಹೊಂದಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಒಟ್ಟು 100 ಸಮುದ್ರ ವಿಮಾನ ಸೇವೆ ಆರಂಭಕ್ಕೆ ಯೋಚನೆ ನಡೆಸಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ